ನೀಲಂಬೂರು : ಮಗುವಿನ ಕುತ್ತಿಗೆಯಿಂದ ಚಿನ್ನದ ಹಾರವನ್ನು ಕದ್ದು ನುಂಗಿದ ಮಹಿಳೆಯೊಬ್ಬರು ಪೊಲೀಸ್ ಕಾವಲಿನಲ್ಲಿ ಕಳೆಯುವಂತಾದ ಘಟನೆ ಮಲಪ್ಪುರ ಜಿಲ್ಲೆಯ ನೀಲಂಬೂರಿನಲ್ಲಿ ನಡೆದಿದೆ. ಮಲೆಯಾಳಂ ಚಿತ್ರರಂಗದಲ್ಲಿ ಹಿಟ್ ಆದ ಕಾಸರಗೋಡಿನ ಶೇಣಿ ಮಣಿಯಂಪಾರೆ ಪ್ರದೇಶದಲ್ಲಿ ಚಿತ್ರೀಕರಣಗೊಂಡ "ತೊಂಡಿ ಮುದಲುಮ್ ದೃಕ್ ಸಾಕ್ಷಿಯುಮ್" ಕಥೆಗೆ ಸಮಾನ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಮೀನಾ (35) ಎಂಬ ಯುವತಿಯನ್ನು ಬಂಧಿಸಿದ್ದಾರೆ.
ಸೋಮವಾರ ನೀಲಂಬೂರು ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಮಕ್ಕಳ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದ ಮಗುವಿನ ಕುತ್ತಿಗೆಯಿಂದ ಸಮೀನಾ ಸರವನ್ನು ಕದ್ದಿದ್ದಾಳೆ. ಮಗುವಿನ ಕುತ್ತಿಗೆಯಲ್ಲಿದ್ದ 3.5 ಗ್ರಾಂ ಹಾರ ನಾಪತ್ತೆಯಾಗಿದೆ. ವರಾಂಡಾದಲ್ಲಿ ಓಡಾಡುತ್ತಿದ್ದ ಮಗುವನ್ನು ಯುವತಿಯೊಬ್ಬಳು ಮುದ್ದಾಡುತ್ತಿರುವುದನ್ನು ನೋಡಿರುವುದಾಗಿ ಅಲ್ಲಿದ್ದವರು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಚಾರಿಸಿದಾಗ ಯುವತಿ ಸರವನ್ನು ನುಂಗಿದಳು. ಸ್ಥಳೀಯರು ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಇದೀಗ ಆಕೆಗೆ ಅದನ್ನು ಗಂಟಲಿನಿಂದ ಹೊರತೆಗೆಯಲು ಸಾಧ್ಯವಾಗಿಲ್ಲ. ಸಮೀನಾ ಸತತ ಮೂರನೇ ದಿನವೂ ಆಸ್ಪತ್ರೆಯಲ್ಲಿ ಮಹಿಳಾ ಪೊಲೀಸರ ವಶದಲ್ಲಿದ್ದು, ಹಾರವನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ.

0 Comments