Ticker

6/recent/ticker-posts

Ad Code

ಮೂರು ವರ್ಷಗಳಲ್ಲಿ ಏಳು ಮದುವೆಗಳು : ವರ ಮತ್ತು ದಲ್ಲಾಳಿಯ ಬಂಧನ

 

ಮಂಗಳೂರು : ಮೂರು ವರ್ಷಗಳಲ್ಲಿ ಏಳು ಬಾರಿ ಮದುವೆಯಾಗಿ ಲಕ್ಷಗಟ್ಟಲೆ ಹಣ ಪಡೆದು ಪರಾರಿಯಾಗಿದ್ದ ಯುವಕ ಮತ್ತು ಮದುವೆ ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಾವುವಿನ ಸುಶಾಂತ್ ಅಂಕುಶ್ ಪೂಜಾರಿ ಅಲಿಯಾಸ್ ಸುಶಾಂತ್ ಕರ್ಕೇರಿ (32) ಮತ್ತು ಮದುವೆ ದಲ್ಲಾಳಿ ಭಾಸ್ಕರ್ (36) ಅವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಅರ್ನಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸುಶಾಂತ್ ಮತ್ತು ಮಹಾರಾಷ್ಟ್ರದ ಮಹಿಳೆಯೊಂದಿಗೆ  ಫೆಬ್ರವರಿ 2, 2025 ರಂದು ವಿವಾಹ ನಡೆದಿತ್ತು. ವಿವಾಹ ಜಾಹೀರಾತಿನ ಮೂಲಕ ಮದುವೆ ದಲ್ಲಾಳಿ ಭಾಸ್ಕರ್ ಸಹಾಯದಿಂದ ವಿವಾಹ ನಡೆಯಿತು. ಮದುವೆಯಾದ ವಾರಗಳ ನಂತರ, ಈ ಇಬ್ಬರು ಮಹಿಳೆಯ 6.60 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಮಹರಾಷ್ಟ್ರದ ಅರ್ನಾಲ್ ಪೊಲೀಸರು ಕೇಸು ದಾಖಲಿಸಿಕೊಂಡು. ಪ್ರಕರಣವನ್ನು ಉರ್ವ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಉರ್ವ ಪೊಲೀಸರ ಕಾರ್ಯತಂತ್ರದ ತನಿಖೆಯಲ್ಲಿ ವಿವಾಹ ವಂಚನೆಯ ವೀರ ಸಿಕ್ಕಿಬಿದ್ದಿದ್ದು ತಕ್ಷಣ ಮದುವೆ ದಲ್ಲಾಳಿ ಕೂಡ ಪೊಲೀಸರ ಬಲೆಗೆ ಬಿದ್ದ. ವಿಚಾರಣೆ ನಡೆಸಿದಾಗ, ಸುಶಾಂತ್ ಇದೇ ರೀತಿಯಲ್ಲಿ ಇತರ ಆರು ವಿವಾಹ ಆಗಿದ್ದಾನೆ. ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಮಂಗಳೂರು, ಉಡುಪಿ ಮತ್ತು ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿವಾಹಗಳನ್ನು ನಡೆಸಲಾಗಿದೆ. ಇಬ್ಬರು ಹುಡುಗಿಯರಿಗೆ ಮದುವೆಯ ಭರವಸೆ ನೀಡಿ ಹಣ ಪಡೆದಿದ್ದಾನೆ ಎಂಬ ಆರೋಪ ಕೂಡಾ  ಇದೆ ಎನ್ನಲಾಗಿದೆ.

Post a Comment

0 Comments