Ticker

6/recent/ticker-posts

Ad Code

ಕಣಿಹಿತ್ತಿಲು ತರವಾಡು ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

 

ಬಾಯಾರು : ಶ್ರೀ ಮಲರಾಯ ಧೂಮವಾತಿ ಧರ್ಮದೈವ ಕುಪ್ಪೆ ಪಂಜುರ್ಲಿ ನಾಗ ಪರಿವಾರ ದೈವಸ್ಥಾನ ಕಣಿಹಿತ್ತಿಲು ಬಾಯಾರು ಇಲ್ಲಿನ ನಾಗ ದೇವರ ಪುನರ್ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವ ದ ಆಮಂತ್ರಣ ಪತ್ರಿಕೆ  ಕುಟುಂಬದ ಹಿರಿಯರಾದ ಕೊರಗಪ್ಪ ಗುರುಸ್ವಾಮಿ ಕಾಸರಗೋಡು ಬಿಡುಗಡೆ ಮಾಡಿದರು.

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ  ಶ್ರೀಧರ್ ಬಾಳೆಕಲ್ಲು, ಪೈವಳಿಕೆ ಪಂಚಾಯತ್ ಸದಸ್ಯೆ  ಯಶೋಧ ಚಕ್ಕರೆಗುಳಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಚಿದಾನಂದ ಅಜ್ಜಾವರ,  ನಾರಾಯಣ ಕೊರಕ್ಕೊಡು, ಪ್ರೇಮ್ ಜೀತ್ ಕಾಸರಗೋಡು, ಕೊರಗಪ್ಪ ಪೂಜಾರಿ ಸುಣ್ಣಾಡ, ಶ್ರೀಧರ್ ಕುಕ್ಕಾಜೆ, ದಿನೇಶ್ ಸಂಟನಡ್ಕ ಮತ್ತು  ದೈವದ ಪೂಜಾರಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. 

ಮಾರ್ಚ್ 18, 19, 20 ಮೂರು ದಿನದ ನಾಗ ಪ್ರತಿಷ್ಠೆ, ಹಾಗೂ ಎಪ್ರಿಲ್ 5, 6 ದೈವಗಳ ವಾರ್ಷಿಕ ನೇಮೋತ್ಸವವು ನಡೆಯಲಿರುವುದು. ಏಪ್ರಿಲ್ 4ರಂದು ಶನಿವಾರ ಬೆಳಿಗ್ಗೆ ಹರಿಸೇವೆ ಸಂಜೆ ಪರಿವಾರ ದೈವಗಳ ನೇಮೋತ್ಸವ, ಏಪ್ರಿಲ್ 5 ಆದಿತ್ಯವಾರ ಧೂಮಾವತಿ ಹಾಗೂ ಮಲರಾಯ ದೈವಗಳ ನೇಮೋತ್ಸವ ನಡೆಯಲಿರುವುದು.

Post a Comment

0 Comments