Ticker

6/recent/ticker-posts

Ad Code

ಅರ್ಜಾಲು ತರವಾಡು ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮನೇಮ : ಆಮಂತ್ರಣ ಪತ್ರಿಕೆ ಬಿಡುಗಡೆ

 

ಕಾಸರಗೋಡು ; ಅರ್ಜಾಲು ಶ್ರೀ ಧೂಮಾವತಿ ದೈವಸ್ಥಾನ ಅಡ್ಕತ್ತಬೈಲು - ಗೋಳಿತ್ತಡಿ ಒಂದು ಕುಂದು  ನಲ್ವತ್ತು ದೈವದ ಕಟ್ಟೆಯ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮನೇಮ ಮಾರ್ಚ್ 26ರಿಂದ 29ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ದೈವ ದೇವರುಗಳ ಅಭಯವೇ ಜನ ಸಾಮಾನ್ಯನ ಶ್ರೇಯೋಭಿವೃದ್ಧಿಗೆ ಮೂಲ ಕಾರಣ ಆದ್ದರಿಂದ ತರವಾಡು ದೈವಸ್ಥಾನಗಳು ಕುಟುಂಬದ ಉಸಿರಿದ್ದಂತೆ ಎಂದರು. ಯಜಮಾನ ಸಂಜೀವ ರೈ ಅರ್ಜಾಲು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧೂಮಾವತಿ ದೈವಸ್ಥಾನ ಅರ್ಚಕ ಗೋಪಾಲ ಕೃಷ್ಣ ಅಡಿಗ ಉಪಸ್ಥಿತರಿದ್ದರು. ಗಣೇಶ್ ರೈ ಅರ್ಜಾಲ್, ಸುಬ್ಬಣ್ಣ ರೈ ಪುತ್ರಕಳ ಅಧ್ಯಕ್ಷರು ಅರ್ಜಲ್ ಶ್ರಿ ಧೂಮಾವತಿ ಸೇವಾ ಟ್ರಸ್ಟ್ , ದೇರಣ್ಣ ರೈ ಅಧ್ಯಕ್ಷರು ಬ್ರಹ್ಮಕಲಶೋತ್ಸವ  ಸಮಿತಿ ಮೊದಲಾದವರು ಉಪಸ್ಥಿತರಿದ್ದರು. ರಕ್ಷಾ ಮತ್ತು ಸ್ವಾತಿ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶೋತ್ಸವ  ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಸ್ವಾಗತಿಸಿ, ಸುಬ್ಬಣ್ಣರೈ ಅರ್ಜಲು ವಂದಿಸಿಸರು.

Post a Comment

0 Comments