Ticker

6/recent/ticker-posts

Ad Code

ದೀಪಕ್ ಆತ್ಮಹತ್ಯೆ ಪ್ರಕರಣ ಆರೋಪಿ ಸೆರೆ

ಕಣ್ಣೂರು: ದೀಪಕ್ ಆತ್ಮಹತ್ಯೆ ಪ್ರಕರಣದ ಆರೋಪಿ ಶಿಂಜಿತಾ ಮುಸ್ತಫಾರನ್ನು ಬಂಧಿಸಲಾಗಿದೆ. ಕೋಝಿಕ್ಕೋಡ್ ಮೂಲದ ದೀಪಕ್ ಬಸ್ಸಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಿಂಜಿತಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪ್ರಸರಿಸಿದ ಹಿನ್ನೆಲೆಯಲ್ಲಿ ದೀಪಕ್ ಅವರು  ಆತ್ಮಹತ್ಯೆ ಮಾಡಿಕೊಂಡಿದ್ದು, ದೀಪಕ್ ಅವರ ತಾಯಿ  ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ ನಂತರ ಶಿಂಜಿತಾ ತಲೆಮರೆಸಿಕೊಂಡಿದ್ದು, ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಕೆ ವಿದೇಶಕ್ಕೆ ಹೋಗುವ ಸಾಧ್ಯತೆಯನ್ನು ಪರಿಗಣಿಸಿ ಪೊಲೀಸರು ಆಕೆಯ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ದೀಪಕ್ ಸಾವನ್ನಪ್ಪಿದ ಆರು ದಿನಗಳ ನಂತರ ಶಿಂಜಿತಾರನ್ನು  ಆಕೆಯ ಸಂಬಂಧಿಕರ ಮನೆಯಲ್ಲಿ ಬಂಧಿಸಲಾಯಿತು. 

Post a Comment

0 Comments