Ticker

6/recent/ticker-posts

Ad Code

ಜಾದೂಗಾರ ಪ್ರೋ.ಮಾಧವ್ ನಿಧನ


 ಕಾಸರಗೋಡು : ಕರ್ನಾಟಕ ಹಾಗೂ ಕೇರಳದ ಜಾದೂ ರಂಗದ ಬೆಳವಣಿಗೆಗೆ  ಮಹತ್ತರ ಕೊಡುಗೆ ನೀಡಿದ್ದ, ನಾರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಹಿರಿಯ ಜಾದೂಗಾರ ಪ್ರೋ. ಮಾಧವರವರು ( 73 )  ನಿಧನರಾದರು. ನಾರ್ತ್ ಮಲಬಾರ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸಿದ್ದ ಪ್ರೋ.ಮಾಧವರು ಜಾದೂ ಕಲೆಯಲ್ಲಿ ವೃತ್ತಿಪರ ಜಾದೂಗಾರರನ್ನು ಮೀರಿಸುವ ಪರಿಣಿತಿಯನ್ನು ಹೊಂದಿದ್ದರು. 15 ಕಲಾವಿದರ " ಮಾಯ ರಂಜಿನಿ " ತಂಡವನ್ನು ಕಟ್ಟಿ, ಅಪಾರ ಪ್ರಮಾಣದ ಇಲ್ಲ್ಯುಷನ್ ಜಾದೂ ಸಾಮಾಗ್ರಿಗಳನ್ನು ಬಳಸಿ ಕರ್ನಾಟಕ ಹಾಗೂ ಕೇರಳದ ವಿವಿಧೆಡೆ  ಸುಮಾರು ಐದು ದಶಕಗಳ ಕಾಲ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ.

ಉತ್ತಮ ವಾಗ್ಮಿಯಾಗಿ, ಜಾದೂ ಕ್ಷೇತ್ರದ ಅಪಾರ ಅನುಭವ ಹಾಗೂ ಜ್ಞಾನವನ್ನು ಹೊಂದಿದ್ದ ಪ್ರೊ.ಮಾಧವರು ನಾರ್ತ್ ಮಲಬಾರ ಮ್ಯಾಜಿಕ್ ಫೌಂಡೇಷನ್ ಸಂಘಟನೆಯ ಮೂಲಕ ಜಾದೂ ಕ್ಷೇತ್ರದ ಉನ್ನತಿಗೆ ಶ್ರಮಿಸಿದ್ದರು. ಮಂಗಳೂರಿನ ಜಾದೂ ಸಂಘಟನೆ ಮಂಗಳಾ ಮ್ಯಾಜಿಕ್ ಸರ್ಕಲ್ ಇದರ ಸ್ಥಾಪಕ ಸದಸ್ಯರಾಗಿದ್ದರು. ಕಿರಿಯ ಜಾದೂಗಾರನಾಗಿ ರಾಷ್ಟ್ರದ ಗಮನ ಸೆಳೆದಿದ್ದ ದಿವಂಗತ ಮಾಸ್ಟರ್ ಚಿಂತನ್ ಇವರ ಪುತ್ರನಾಗಿದ್ದ. ಕೇರಳ ಕಾಸರಗೋಡಿನ ಉಬ್ರಂಗಳ ನಿವಾಸಿಯಾಗಿದ್ದ ಪ್ರೊ.ಮಾಧವರು ಕೂಡ್ಲು ಗ್ರಾಮದಲ್ಲಿ ನೆಲೆಸಿದ್ದರು. ಪತ್ನಿ ಜಯಶ್ರೀ, ಪುತ್ರ ಖ್ಯಾತ ಫೊಟೋ ಜರ್ನಲಿಸ್ಟ್ ಚೇತನ್, ಪುತ್ರಿಯರಾದ ಚೈತ್ರ ಮತ್ತು ಚೇತಸ ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ.

Post a Comment

0 Comments