Ticker

6/recent/ticker-posts

Ad Code

ಸ್ಪೇಶಲ್ ಕ್ಲಾಸಿಗೆಂದು ಹೋದ ಬಾಲಕಿ ನಾಪತ್ತೆ : ತಾಯಿಯಿಂದ ಬದಿಯಡ್ಕ ಪೋಲಿಸರಿಗೆ ದೂರು

 


ಬದಿಯಡ್ಕ :  ಸ್ಪೇಶಲ್ ಕ್ಲಾಸಿಗೆ ಎಂದು ಹೇಳಿ ಶಾಲೆಗೆ ಹೋಗಿದ್ದ ಮಗಳು ಮನೆಗೆ ತಿರುಗಿ ಬರಲಿಲ್ಲ ಎಂದು ತಾಯಿ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಳ ಕುಕ್ಕಂಕೂಡ್ಲುವಿನ ಮಹೇಶ್ ಎಂವರ ಪುತ್ರಿ ತ್ರಿಷಾ (17) ಕಾಣೆಯಾದ ಬಾಲಕಿ. ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದ ತ್ರಿಶಾ ಸಂಜೆಯವರೆಗೂ ಹಿಂತಿರುಗದ ಕಾರಣ ಸಂಬಂಧಿಕರ ಮನೆ ಹಾಗೂ ಇತರೆಡೆ ಹುಡುಕಾಡಿದ್ದಾರೆ. ಅಲ್ಲಿಗೆ ಬರಲಿಲ್ಲ ಎಂದು ಮಾಹಿತಿ ಲಭಿಸಿದ ನಂತರ ಆಕೆಯ ಗೆಳತಿಯ ನಂಬರ್ ಗೆ ಸಂಪರ್ಕಿಸಿದಾಗ ಶಾಲೆಗೆ ಬಂದಿಲ್ಲ ಎಂಬ ಉತ್ತರ ಬಂದಿದೆ. ತ್ರಿಷಾಳ ಫೋನ್  ಬದಿಯಡ್ಕದ  ಅಂಗಡಿಯೊಂದರಲ್ಲಿ  ರಿಪೇರಿ ಮಾಡಲು ನೀಡಲಾಗಿತ್ತು ಹಾಗಾಗಿ ಫೋನ್ ಅವರ ಬಳಿ ಇಲ್ಲ ಎಂದು ತಾಯಿ ಹೇಳಿದ್ದಾರೆ. ಈ ಬಗ್ಗೆ ತಾಯಿ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Post a Comment

0 Comments