ಕಾಸರಗೋಡು : ಪೇರಾಲ್ ಕಣ್ಣೂರಿನ ರಸ್ತೆ ಬದಿ ನಡು ರಾತ್ರಿ ಜೂಜಾಡುತ್ತಿದ್ದ ಇಬ್ಬರನ್ನು ಕುಂಬಳೆ ಎಸ್‌ಐಗಳಾದ ಕೆ. ಶ್ರೀಜೇಶ್, ಅನಂತಕೃಷ್ಣನ್ ಮತ್ತು ಜಿತೇಶ್ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 12,150 ರೂ., ಇಸ್ಪೀಟ್ ಎಲೆಗಳು, ಸ್ಟೀಲ್ ತಟ್ಟೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆರ್ವಾಡ್ ಕೆ.ಕೆ. ರಸ್ತೆಯ ಶಹೀರ್ ಮಂಜಿಲ್‌ನ ರಹೀಮ್ ಕೆ (38) ಮತ್ತು ಕುಂಟಗೇರಡ್ಕದ ವೀರಯ್ಯ ಮನೆಯ ಶರತ್ ಎಂ (36) ಅವರನ್ನು ವಶಕ್ಕೆ ಪಡೆಯಲಾಗಿದೆ.

0 Comments