Ticker

6/recent/ticker-posts

Ad Code

ಡ್ರೈವಿಂಗ್ ಪರೀಕ್ಷೆಗೆಂದು ತೆರಳಿದ ಗೃಹಿಣಿ ನಾಪತ್ತೆ

ಬದಿಯಡ್ಕ : ಡ್ರೈವಿಂಗ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೊರಗಿಳಿದ ಗೃಹಿಣಿ ನಾಪತ್ತೆಯಾದ ಬಗ್ಗೆ ಬದಿಯಡ್ಕ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ 31 ವರ್ಷ ಹರೆಯದ ಗೃಹಿಣಿ  ನೆಲ್ಲಿಕಟ್ಟೆಯ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದು ಈಕೆ ಶುಕ್ರವಾರ ಬೆಳಿಗ್ಗೆ ಡ್ರೈವಿಂಗ್  ಪರೀಕ್ಷೆಗೆ ವಿದ್ಯಾನಗರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು ಎಂದು ಆಕೆಯ ಪತಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments