ಕಾಸರಗೋಡು : ತೀವ್ರ ರಾಜಕೀಯ ಸಂಚಲನ ಸೃಷ್ಠಿಸಿದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೊನೆಯ ಹಂತದಲ್ಲಿ ಕೆ.ಸುರೇಂದ್ರನ್ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆ ಮೂಲಕ ಚರ್ಚೆ ಮುಕ್ತಿ ಕಾಣುವ ಹಂತದಲ್ಲಿದೆ.
ಈ ನಡುವೆ ಸ್ವತಃ ಕೆ.ಸುರೇಂದ್ರನ್ ಮಂಜೇಶ್ವರದ ಜನತೆಗೆ ನನ್ನನ್ನು ಬಿಟ್ಟಿರಲಾಗದಷ್ಟು ಬಾಂಧ್ಯವ್ಯತೆಯಿದೆ ಎಂದು ಮಾಧ್ಯಮದ ಮುಂದೆ ಹೇಳಿರುವುದು ಈ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಯ ಇನ್ನಷ್ಟು ಸಾಧ್ಯತೆಯನ್ನು ಹೊರ ಪ್ರಕಟಿಸಿದಂತಾಗಿದೆ.
ವಿಧಾನ ಸಭಾ ಚುನಾವಣೆಯ ಪೂರ್ವಭಾವಿ ತಯಾರಿಯ ಹಿನ್ನಲೆಯಲ್ಲಿ ಬಿಜೆಪಿಯ ಬಹುನಿರೀಕ್ಷಿತ ಕ್ಷೇತ್ರವಾದ ಮಂಜೇಶ್ವರದ ಅಭ್ಯರ್ಥಿ ಆಯ್ಕೆಯ ಬಗ್ಗೆ ಭಾರೀ ಚರ್ಚೆ ಸೃಷ್ಠಿಸಿತ್ತು. ಸ್ಥಳೀಯ ಅಭ್ಯರ್ಥಿಗಳನ್ನೇ ಚುನಾವಣಾ ಕಣಕ್ಕಿಳಿಸಬೇಕೆಂದು ವಾದಿಸುತ್ತಿರುವಾಗಲೇ ಬಿಜೆಪಿ ಜಿಲ್ಲಾಧ್ಯಕ್ಷೆ ಆಶ್ವಿನಿ ಎಂ.ಎಲ್. ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಅಭಿಪ್ರಾಯ ಮೂಡಿ ಬಂದಿತ್ತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿ ಈ ಹಿಂದೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋಲನ್ನುಂಡ ಅಶ್ವಿನಿಗೆದುರಾಗಿ ಪಕ್ಷದ ಪ್ರಮುಖರು ವಿರೋಧ ವ್ಯಕ್ತಪಡಿಸಿದ ನಾಟಕೀಯ ಸನ್ನಿವೇಶ ಕಂಡು ಬಂದಿತ್ತು. ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಒಂದಷ್ಡು ಪ್ರಮುಖರ ಬಗ್ಗೆ ನಿಗಾ ಇರಿಸಲಾಗಿತ್ತು ಮಾತ್ರವಲ್ಲದೆ ಪಕ್ಷದ ಸಕ್ರಿಯ ಕಾರ್ಯಕರ್ತ ವಿಜಯ ಕುಮಾರ್ ರೈ ಯನ್ನು ಪಕ್ಷದ ಕಾರ್ಯಕ್ರಮಗಳಿಂದ ಹೊರಗಿರಿಸಿದ ಬೆಳವಣಿಗೆ ನಡೆದಿತ್ತು. ಸ್ವತಃ ಜಿಲ್ಲಾಧ್ಯಕ್ಷೆ ಮಂಜೇಶ್ವರಕ್ಕೆ ರಾಜ್ಯ ಮಟ್ಟದ ಪಕ್ಷದ ಎ ಕ್ಲಾಸ್ ಸದಸ್ಯರೇ ಅಭ್ಯರ್ಥಿಗಳಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅತ್ಯಧಿಕ ಎನ್ ಡಿಎ ಪರ ಮತಗಳಿರುವ ಮಂಜೇಶ್ವರ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಅಲೆ ಇದ್ದು ಅಭ್ಯರ್ಥಿ ಆಯ್ಕೆಯಲ್ಲಿ ತೀವ್ರ ಚರ್ಚೆ ಮುಂದುವರಿದಿತ್ತು. ಸಂಘ ಪರಿವಾರ,ವಿ.ಹಿಂ.ಪ, ಬಜರಂಗದಳ, ಮಾತೃ ಮಂಡಳಿ, ಯುವ ಮೋರ್ಚಾ, ಅಲ್ಪ ಸಂಖ್ಯಾತ ಮೋರ್ಚಾ ಸಹಿತ ವಿವಿಧ ಪಕ್ಷ ಸಂಘಟನೆಗಳು ಹಲವರ ಹೆಸರನ್ನು ಉಲ್ಲೇಖಿಸಿತ್ತು. ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಶ್ರೀಕಾಂತ್ ಕಾಸರಗೋಡು, ವಿಜಯ ಕುಮಾರ್ ರೈ, ನವೀನ್ ರಾಜ್,ಕೋಳಾರು ಸತೀಶ್ಚಂದ್ರ ಭಂಡಾರಿ ವತ್ಸರಾಜ್ ಕೆ.ಪಿ,ಅನಿಲ್ ಕುಮಾರ್ ಸಹಿತ ಕೊನೆಯ ಕ್ಷಣದಲ್ಲಿ ವಿ.ಹಿಂ.ಪ.ನ ಮಾತೃ ಮಂಡಳಿ ಮುಂದಾಳು ಮೀರಾ ಆಳ್ವ ಅವರ ಹೆಸರು ಸಹಿತ ಪರಿಗಣನೆಯ ಪಟ್ಟಿಯಲ್ಲಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಪ್ರಧಾನ ಮಂತ್ರಿ ಮೋದಿಜಿ ಕೇರಳಕ್ಕೆ ಆಗಮಿಸಿದ ಬಳಿಕ ಅಭ್ಯರ್ಥಿ ಆಯ್ಕೆಯ ಕೊನೆಯ ಕ್ಷಣದಲ್ಲಿ ತೀವ್ರ ಬೆಳವಣಿಗೆ ಕಂಡಿದ್ದು ಮಂಜೇಶ್ವರಕ್ಕೆ ಮತ್ತೊಮ್ಮೆ ಕೆ.ಸುರೇಂದ್ರನ್ ಬಿಜೆಪಿ ಅಭ್ಯರ್ಥಿಯಾಗಿ ಪಾದಾರ್ಪಣೆಗೈಯಲಿರುವುದು ಪಕ್ಷ ಅಭಿಮಾನಿಗಳ ಪ್ರತಿಕ್ರಿಯೆಯನ್ನು ನಿರೀಕ್ಷಿಸುವಂತಿದೆ ಎನ್ನಲಾಗುತ್ತಿದೆ.
.jpeg)
0 Comments