Ticker

6/recent/ticker-posts

Ad Code

ಭಕ್ತಿ, ತಪಸ್ಸು ಮತ್ತು ಆತ್ಮಜಾಗೃತಿಯ ಹಬ್ಬ ಮಹಾಶಿವರಾತ್ರಿ


ಮಹಾಶಿವರಾತ್ರಿ ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಭಕ್ತರು ಭಕ್ತಿ, ಶ್ರದ್ಧೆ ಮತ್ತು ಆತ್ಮನಿಗ್ರಹದೊಂದಿಗೆ ಆಚರಿಸುತ್ತಾರೆ. “ಮಹಾ” ಎಂದರೆ ಮಹತ್ತರ, “ಶಿವರಾತ್ರಿ” ಎಂದರೆ ಶಿವನ ಪವಿತ್ರ ರಾತ್ರಿ. ಆದ್ದರಿಂದ ಮಹಾಶಿವರಾತ್ರಿ ಎಂದರೆ 'ಶಿವನ ಮಹತ್ತರ ಪವಿತ್ರ ರಾತ್ರಿ' ಎಂದರ್ಥ ಹೊಂದಿರುವ ಈ ಹಬ್ಬವನ್ನು ಭಕ್ತರು ಉಪವಾಸ, ಜಾಗರಣೆ ಮತ್ತು ಪೂಜಾ ಕಾರ್ಯಕ್ರಮಗಳ ಮೂಲಕ ಭಕ್ತಿಭಾವದಿಂದ ಆಚರಿಸುತ್ತಾರೆ. ಈ ಹಬ್ಬವು ಭಕ್ತಿ ಮತ್ತು ಆತ್ಮಚಿಂತನೆಯ ಸಂಕೇತವಾಗಿದೆ.

ಶಿವರಾತ್ರಿ ದಿನ ವಿಶೇಷವಾಗಿ ಶಿವಾರಾಧನೆಗೆ ಮೀಸಲಾಗಿದೆ. ಪುರಾಣಗಳ ಪ್ರಕಾರ ಈ ದಿನವೇ ಶಿವ ಮತ್ತು ಪಾರ್ವತಿ  ವಿವಾಹ ನಡೆದಿತ್ತೆಂದು ನಂಬಲಾಗಿದೆ. ಮತ್ತೊಂದು ನಂಬಿಕೆಯ ಪ್ರಕಾರ, ಈ ರಾತ್ರಿ ಶಿವನು ಲಿಂಗ ರೂಪದಲ್ಲಿ ಪ್ರಪಂಚಕ್ಕೆ ತಾನೇ ಅನಾವರಣಗೊಂಡ ದಿನ. ಶಿವನು ಸಂಹಾರಕನಾದರೂ, ಆತನು ಕರುಣಾಮಯನೂ  ರಕ್ಷಕನೂ ಆಗಿದ್ದಾನೆ. ಆದ್ದರಿಂದ ಭಕ್ತರು ಈ ದಿನವನ್ನು ಪವಿತ್ರವಾಗಿ ಆಚರಿಸುತ್ತಾರೆ.

ಈ ದಿನ ಭಕ್ತರು ಉಪವಾಸ ಆಚರಿಸುತ್ತಾರೆ. ಶಿವಲಿಂಗಕ್ಕೆ ಹಾಲು, ಜೇನು, ಬೆಲ್ಲ, ಗಂಗಾಜಲದಿಂದ ಅಭಿಷೇಕ ಮಾಡುತ್ತಾರೆ. "ಓಂ ನಮಃ ಶಿವಾಯ” ಮಂತ್ರ ಜಪಿಸುತ್ತಾರೆ. ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ

ಜಾಗರಣೆ ಮತ್ತು ಉಪವಾಸದ ತತ್ವ

ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಆತ್ಮಶುದ್ಧಿ ಮತ್ತು ಮನಶಾಂತಿಯ ಸಂಕೇತ. ಜಾಗರಣೆ ಮಾಡುವುದು ಅಜ್ಞಾನವನ್ನು ದೂರಮಾಡಿ ಜ್ಞಾನಪ್ರಕಾಶವನ್ನು ಪಡೆಯುವ ಸಂಕೇತವೂ ಹೌದು.  ಉಪವಾಸವು ದೇಹದ ಶುದ್ಧೀಕರಣಕ್ಕೆ ಮಾತ್ರವಲ್ಲ, ಮನಸ್ಸಿನ ನಿಯಂತ್ರಣಕ್ಕೂ ಸಹಾಯಕ. ಭಕ್ತರು ತಮ್ಮ ಇಚ್ಛಾಶಕ್ತಿಯನ್ನು ವೃದ್ಧಿಸಿ ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಲು ಈ ಆಚರಣೆಗಳನ್ನು ಅನುಸರಿಸುತ್ತಾರೆ.

ಮಹಾಶಿವರಾತ್ರಿ ಕೇವಲ ಹಬ್ಬವಲ್ಲ; ಅದು ಆತ್ಮಪರಿಶೀಲನೆಯ ಮತ್ತು ಭಕ್ತಿಯ ಮಹೋತ್ಸವ. ಮಹಾಶಿವರಾತ್ರಿ ನಮಗೆ ತಾಳ್ಮೆ, ನಿಯಮ ಮತ್ತು ಭಕ್ತಿಯ ಮಹತ್ವವನ್ನು ತಿಳಿಸುತ್ತದೆ. ಜೀವನದಲ್ಲಿ ದುಷ್ಟಗುಣಗಳನ್ನು ತೊರೆದು ಸತ್ಯ, ಧರ್ಮ ಮತ್ತು ಶಾಂತಿಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಶಿವನ ಜೀವನವು ಸರಳತೆ ಮತ್ತು ವೈರಾಗ್ಯದ ಸಂಕೇತವಾಗಿದೆ. ಹೀಗಾಗಿ ಮಹಾಶಿವರಾತ್ರಿ ಕೇವಲ ಒಂದು ಹಬ್ಬವಲ್ಲ; ಅದು ಭಕ್ತಿ ಮತ್ತು ಆತ್ಮಜಾಗೃತಿಯ ದಿನ. 

ಸಂಗ್ರಹ ಲೇಖನ : ವನಜಾಕ್ಷಿ ಪಿ. ಚೆಂಬ್ರಕಾನ

Post a Comment

0 Comments