Ticker

6/recent/ticker-posts

Ad Code

ಚಿನ್ನು ಪಾಪುವಿನ ಗೆಳೆಯ ಆತ್ಮಹತ್ಯೆ

 

ಕರ್ನಾಟಕ - ಕೇರಳ ಗಡಿಭಾಗವಾದ ಕಾಸರಗೋಡಿನ ಆದೂರು ಮೂಲದ ನಿವಾಸಿ, ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆಲಿಯಾಸ್‌ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಇದೀಗ ಅವರ ಪ್ರಿಯಕರನೂ ಸಾವಿಗೆ ಶರಣಾಗಿದ್ದಾರೆ. ಮೃತನನ್ನು ಸಂದೇಶ್‌ ಕೆ. (29) ಎಂದು ಗುರುತಿಸಲಾಗಿದೆ. ಚೌಕಿ ಮೂಲದ ಸಂದೇಶ್ ಕೂಡ್ಲು  ಮನ್ನಿಪಾಡಿಯಲ್ಲಿರುವ ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಅವರ ಶವ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಿನ್ನು ಪಾಪು ಅಲಿಯಾಸ್ ರೇಷ್ಮಾ ಮತ್ತು ಸಂದೇಶ್ ಒಟ್ಟಿಗೆ ವಾಸಿಸುತ್ತಿದ್ದರು. ಕಳೆದ ಸೋಮವಾರ ಮಧ್ಯಾಹ್ನ ಉಳಿಯತ್ತಡ್ಕದಲ್ಲಿರುವ ತನ್ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ರೇಷ್ಮಾ ನೇಣು ಬಿಗಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ  ಸಂದೇಶ್ ಅವರನ್ನು ಪೊಲೀಸರು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ರೇಷ್ಮಾ ಅವರ ಸಾವಿನ ನಂತರ ಸಂದೇಶ್ ಮಾನಸಿಕ ಒತ್ತಡದಲ್ಲಿದ್ದರು.

Post a Comment

0 Comments