Ticker

6/recent/ticker-posts

Ad Code

ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ : ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಮಾರ್ಚ್ 22 ರಿಂದ 24 ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು  ದೈವಸ್ಥಾನದಲ್ಲಿ ಜರಗಿತು. ಕ್ಷೇತ್ರದ ಅರ್ಚಕ ಉದಯ ಕುಂಜತ್ತಾಯ ವಿಶೇಷ ಪ್ರಾರ್ಥನೆ ನಡೆಸಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸುಧೀರ್  ಕುಮಾರ್ ರೈ, ಸದಸ್ಯ ಅನಂತ ರೈ, ಮೇಗಿನ ಬೆಳಿಂಜ ಕುಟುಂಬಸ್ಥರು, ಕೆಳಗಿನ ಬೆಳಿಂಜ ಕುಟುಂಬಸ್ಥರು, ಶ್ರೀ ಪೂಮಾಣಿ ಕಿನ್ನಿಮಾಣಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

Post a Comment

0 Comments