Ticker

6/recent/ticker-posts

Ad Code

ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ಜಿ.ಕೆ.ಶೆಟ್ಟಿ ಅಸ್ತಂಗತ

ಕಾಸರಗೋಡು : ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಜಿ.ಕೆ.ಶೆಟ್ಟಿ (80) ನಿಧನರಾದರು. ವೃತ್ತಿ ಜೀವನದ ಜತೆಗೆ ಸಾಂಸ್ಕೃತಿಕ, ಸಾಮಾಜಿಕ,ಸಾಹಿತ್ಯಿಕವಾಗಿ ತೊಡಗಿಸಿಕೊಂಡಿದ್ದ ಜಿ.ಕೆ. ಶೆಟ್ಟರು ನಾಟಕ ಅಭಿನಯ, ನಿರ್ದೇಶನ ,ಸಂಘಟನಾತ್ಮಕ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಯವನಿಕಾ ಕಾಸರಗೋಡು ಎಂಬ ಸಾಂಸ್ಕೃತಿಕ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಇವರು ಈ ಸಂಸ್ಥೆಯ ಮೂಲಕ ಹಲವಾರು ಕಲಾವಿದರು ಮತ್ತು ನಾಟಕಗಳು ಬೆಳಕಿಗೆ ಬರಲು ಶ್ರಮಿಸಿದವರಲ್ಲಿ ಒರ್ವರಾಗಿದ್ದಾರೆ. ಉತ್ತಮ‌ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದ ಇವರು ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನ‌ ಮಾಜಿ ಅಧ್ಯಕ್ಷರಾಗಿದ್ದಾರೆ.

Post a Comment

0 Comments