Ticker

6/recent/ticker-posts

Ad Code

ಕೆ-ಟೆಟ್ ಇಲ್ಲದ ಶಿಕ್ಷಕರನ್ನು ಖಾಯಂಗೊಳಿಸಲು ಸಂಪುಟ ಸಭೆ ನಿರ್ಧಾರ : ಸಚಿವ ಶಿವನ್ ಕುಟ್ಟಿ

ತಿರುವನಂತಪುರ: ಕೆ-ಟೆಟ್ ವಿಚಾರದಲ್ಲಿ ರಾಜ್ಯ ಸರ್ಕಾರ ಶಿಕ್ಷಕರ ಪರ ನಿರ್ಧಾರ ಕೈಗೊಂಡಿದೆ. ಅನುದಾನಿತ ಶಾಲೆಗಳಲ್ಲಿ ವಿಕಲಚೇತನ ಶಿಕ್ಷಕರ ಮೀಸಲಾತಿ ಹಾಗೂ ಕೆ-ಟೆಟ್ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಚಿವ ವಿ.ಶಿವನ್ ಕುಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಕಲಚೇತನರ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಎಲ್ಲ ಆಡಳಿತ ಮಂಡಳಿಗಳಿಗೂ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ಎಜಿ ಅವರ ಕಾನೂನು ಸಲಹೆ ಪಡೆಯಲಾಗಿದೆ. ಎನ್‌ಎಸ್‌ಎಸ್‌ಗೆ ಅನ್ವಯವಾಗುವ ತೀರ್ಪು ಇತರ ಮ್ಯಾನೇಜ್‌ಮೆಂಟ್‌ಗಳಿಗೂ ಅನ್ವಯಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಕೆ-ಟೆಟ್ ಇಲ್ಲದ ಶಿಕ್ಷಕರನ್ನು ಖಾಯಂಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಿವನ್‌ಕುಟ್ಟಿ ತಿಳಿಸಿದರು. ಕೆ ಟೆಟ್ ಇಲ್ಲದ ಶಿಕ್ಷಕರ ಸಂಬಳವನ್ನು ತಡೆ ಹಿಡಿಯಲಾಗುವುದಿಲ್ಲ. ಈ‌ಬಗ್ಗೆ  ಕಾನೂನು ಸಲಹೆ ಪಡೆಯಲಾಗುತ್ತಿದ್ದು  ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

Post a Comment

0 Comments