Ticker

6/recent/ticker-posts

Ad Code

ಬೆಂಗಳೂರಿನಲ್ಲಿ ಬೃಹತ್ ಮಾದಕ ದ್ರವ್ಯ ಬೇಟೆ: ಕೇರಳದ ಯುವಕರ ಸಹಿತ ಐವರ ಬಂಧನ


ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್‌ನೊಂದಿಗೆ ಮಲಯಾಳಿ ಯುವಕರು ಸೇರಿದಂತೆ ಐವರು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಥಾಯ್ಲೆಂಡ್‌ನಿಂದ 5 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ತಂದಿದ್ದ ಕೇರಳಿಗರಾದ ಅಜ್ಮಲ್ ಮತ್ತು ಮಜೀದ್ ಬಂಧಿತ ಪ್ರಮುಖರು. ಚಾಕೊಲೇಟ್ ಮತ್ತು ಲೇಸ್ ಪ್ಯಾಕೆಟ್ ಗಳಲ್ಲಿ ಬಚ್ಚಿಟ್ಟು ಅಮಲು ಪದಾರ್ಥಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು  ಎನ್ನಲಾಗಿದೆ. ಹೆಬ್ಬಗೋಡಿನಲ್ಲಿ ಸೆನೆಗಲ್ ಪ್ರಜೆಯೊಬ್ಬರು ಕೂಡ ಒಂದೂವರೆ ಕೋಟಿ ಮೌಲ್ಯದ ಎಂಡಿಎಂಎಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿ. ಹೈಡ್ರೋ ಗಾಂಜಾ, ಗಾಂಜಾ ಮತ್ತು ಎಂಡಿಎಂಎ ಸೇರಿದಂತೆ ಸುಮಾರು 11 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಕೇಂದ್ರ ಅಪರಾಧ ವಿಭಾಗ ವಶಪಡಿಸಿಕೊಂಡಿದೆ. ಬಂಧಿತರು ಬಹುಕಾಲದಿಂದ ಬೆಂಗಳೂರು ಕೇಂದ್ರವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಗ್ರಾಹಕರು ಮತ್ತು ಏಜೆಂಟ್‌ಗಳ ಮೇಲೆ ನಿಗಾ ಇರಿಸಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Post a Comment

0 Comments