Ticker

6/recent/ticker-posts

Ad Code

ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಎಡನೀರು ಶ್ರೀಗಳಿಗೆ ಆಹ್ವಾನ


ಪೆರ್ಲ  : ಪುರಾತನವೂ,ಇತಿಹಾಸ ಪ್ರಸಿದ್ಧವೂ ಆಗಿರುವ ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬರುವ ಮಾರ್ಚ್  29 ರಿಂದ ಎಪ್ರಿಲ್ 3ನೇ ತಾರೀಕಿನ ವರೆಗೆ ಜರಗಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಎಡನೀರು ಮಠಕ್ಕೆ ತೆರಳಿ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ  ನೀಡಿ ಆಶೀರ್ವಾದ, ಮಂತ್ರಾಕ್ಷತೆ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ,ಸೇವಾ ಸಮಿತಿಯ ಡಾ.ಮೇಘ ಶ್ಯಾಮರಾವ್, ಪ್ರಧಾನ ಕಾರ್ಯದರ್ಶಿ ಮಹೇಶ ಗುತ್ತು, ಡಾ.ಸತೀಶ್ ಪುಣಿಂಚಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯ ಗರ್ಭಗೃಹ,ನಮಸ್ಕಾರ ಮಂಟಪ ಮತ್ತು ಸುತ್ತಂಬಲ ಹಾಗೂ ಅಂಗಣಕ್ಕೆ ಕಲ್ಲು ಹಾಸುವ ಕೆಲಸಗಳನ್ನು  ಪೂರ್ತಿಕರಿಸಿ ಇದೀಗ ಪುನಃ ಪ್ರತಿಷ್ಠಾ ‌ಬ್ರಹ್ಮಕಲಶೋತ್ಸವಕ್ಕೆ ತೊಡಗಲಾಗಿದೆ. ಪ್ರಸ್ತುತ ಅನ್ನ ಛತ್ರದ ಕೆಲಸ ಪ್ರಗತಿಯಲ್ಲಿದ್ದು ಶೌಚಾಲಯ, ಸ್ನಾನಗೃಹ ಇತ್ಯಾದಿ ಕಾಮಗಾರಿಗಳಿಗೆ ರೂಪಾಯಿ 50 ಲಕ್ಷ ಮತ್ತು ಬ್ರಹ್ಮಕಲಶ ಕಾರ್ಯಕ್ರಮಗಳಿಗೆ 50 ಲಕ್ಷ ಹೀಗೆ ಒಟ್ಟು ಒಂದು ಕೋಟಿ ರೂಪಾಯಿ ಯೋಜನೆಯಲ್ಲಿ ಬ್ರಹ್ಮಕಲಶೋತ್ಸವ ಜರಗಲಿದ್ದು,ಒಟ್ಟು ಅಂದಾಜು 10,000 ಜನರ ಊಟೋಪಚಾರಗಳ ವ್ಯವಸ್ಥೆ ಹಾಗೂ ದಿನಂಪ್ರತಿ ಭಜನೆ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Post a Comment

0 Comments