Ticker

6/recent/ticker-posts

Ad Code

ಎರಡು ದಿನದ ಮಗುವನ್ನು ಕಸದ ತೊಟ್ಟಿಗೆಸೆದು ಕೊಲೆ


ಬೆಂಗಳೂರು: ನಿರ್ದಯಿ ತಾಯಿಯೊಬ್ಬಳು 2 ದಿನದ ನವಜಾತ ಶಿಶುವನ್ನು ಕಸದ ಗುಡ್ಡೆ ಮೇಲೆ ಎಸೆದು ಹೋಗಿದ್ದು, ಬಿಸಿಲಿನ ತಾಪಕ್ಕೆ ನವಜಾತು ಶಿಶು ಮೃತಪಟ್ಟಿರುವ  ಹೃದಯ ವಿದ್ರಾವಕ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ಅಪಾರ್ಟ್ ಮೆಂಟ್ ಹಿಂಭಾಗದ ಖಾಲಿ ಜಾಗದ ಮೈದಾನದಲ್ಲಿ ಕೆಲ ಯುವಕರು ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಮೈದಾನಲ್ಲಿದ್ದ ಕಸದ ಗುಡ್ಡೆ ಬಳಿ ಮಗು ಸತ್ತಿರುವುದನ್ನು ನೋಡಿ 112ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ನವಜಾತ ಶಿಶು ಮೃತಪಟ್ಟಿರುವುದು ಕಂಡು ಬಂದಿದೆ. ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಪೋಷಕರನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು  ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ನವಜಾತ ಶಿಶುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಘಟನಾ ಸ್ಥಳದ ಸುತ್ತ ಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಸುಬ್ರಹ್ಮಣ್ಯಪುರ ಠಾಣಾ ಪೋಲಿಸರು ತಿಳಿಸಿದ್ದಾರೆ.

Post a Comment

0 Comments