Ticker

6/recent/ticker-posts

Ad Code

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರ ಬಂಧನ

  


ಬದಿಯಡ್ಕ :  ಸಾರ್ವಜನಿಕ ಸ್ಥಳದಲ್ಲಿ ಗಾಂಜಾ  ಸೇದುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಪೈಕ ಬಾಲಡ್ಕ ಎವರೆಸ್ಟ್ ಹೌಸ್ ನ ಅಸೀಬ್ ರಹಮಾನ್ (20) ಮತ್ತು ಪೈಕ ಅರ್ಲಡ್ಕದ ವಿಎಂ ಅಹಮದ್ ರೈಸ್ (24) ಬಂಧಿತರು.ಇಂದು ಮುಂಜಾನೆ 1 ಗಂಟೆ ಸುಮಾರಿಗೆ ನೆಲ್ಲಿಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದ ಬದಿಯಡ್ಕ ಪೊಲೀಸರ ಕಾರ್ಯಾಚರಣೆಯಲ್ಲಿ ನೆಲ್ಲಿಕಟ್ಟೆ ಬಸ್ ನಿಲ್ದಾಣದ ಬಳಿಯಿಂದ ಅಸೀಬ್ ರೆಹಮಾನ್ ಮತ್ತು ಪೆಟ್ರೋಲ್ ಪಂಪ್ ಬಳಿಯಿಂದ ಅಹ್ಮದ್ ನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು  ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು  ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments