Ticker

6/recent/ticker-posts

Ad Code

ಉಪ್ಪಳದಲ್ಲಿ ಯುವತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

 

ಮಂಜೇಶ್ವರ: ಗೃಹಿಣೊಯೋರ್ವೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಉಪ್ಪಳದಲ್ಲಿ ನಡೆದಿದೆ. ಇಲ್ಲಿನ  ಅಲ್ಮಿನಾ ಫ್ಲಾಟ್ ನಿವಾಸಿ ಮುಹಮ್ಮದ್ ತನ್ಸಿಲ್ ಅಬ್ದುಲ್ ರಶೀದ್ ಅವರ ಪತ್ನಿ ಅಫ್ಸಿನಾ ಬಾನು (28) ಮೃತ ಯುವತಿ. ಬುಧವಾರ ರಾತ್ರಿ 9 ರಿಂದ 10 ಗಂಟೆಯ ನಡುವೆ ಪತಿ ತರಾವೀಹ್ ಪ್ರಾರ್ಥನೆಗಾಗಿ ಮಸೀದಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ.  ಹಿಂತಿರುಗಿ ಬಂದಾಗ, ಪತ್ನಿ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅವರ ಚಿಕ್ಕಪ್ಪನ ದೂರಿನ ಆಧಾರದ ಮೇಲೆ, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments