Ticker

6/recent/ticker-posts

Ad Code

ಜಿಲ್ಲೆಯ 6 ಕಡೆಗಳಲ್ಲಿ ಪೂಟ್ ಒವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವ‌ ಗಡ್ಕರಿ ಆದೇಶ


ಕಾಸರಗೋಡು:  ಬಿಜೆಪಿಯ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆಗಳಲ್ಲಿ ಸಾರ್ವಜನಿಕರಿಗೆ ನಡೆದಾಡಲು ಫೂಟ್ ಒವರ್ ಬ್ರಿಡ್ಜ್  ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಂದ್ರ ಸಾರಿಗೆ ಸಚಿವ‌ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ. ಅಡ್ಕತ್ತಬೈಲು, ಸಿ.ಪಿ.ಸಿ.ಆರ್.ಐ, ಮೊಗ್ರಾಲು ಕುನ್ನು, ಐಲ, ಕನಿಲ, ಗೋವಿಂದ ಪೈ ಕಾಲೇಜು ಪರಿಸರ ಎಂಬೆಡೆಗಳಲ್ಲಿ  ಸೇತುವೆ ನಿರ್ಮಿಸಲಾಗುತ್ತಿದೆ. ಇದು ನಿರ್ಮಿಸುವುದರೊಂದಿಗೆ ಈ ಪ್ರದೇಶದ ಜನರ ಬಹುಕಾಲದ ಕನಸು ನನಸಾಗಲಿದೆ. ಇದಕ್ಕಾಗಿ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಕೋಜಿಕ್ಕೋಡ್ ವಲಯ‌ ಉಪಾಧ್ಯಕ್ಷ ವಿಜಯ ಕುಮಾರ್ ರೈ ಎಂಬಿವರು ಗಡ್ಕರಿಯವರನ್ನು ನೇರಾ ಕಂಡು ವಿಷಯ ತಿಳಿಸಿ ಆದೇಶ ಜ್ಯಾರಿಗೆ ತರಲು ಕಾರಣರಾದರು.

Post a Comment

0 Comments