ಪೆರ್ಲ : ಸಮೀಪದ ನಲ್ಕ ನಿವಾಸಿ ವಿವೇಕಾನಂದ ಆಚಾರ್ಯ (56) ಬುಧವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದಾರೆ.ಬಡಗಿ ವೃತ್ತಿಗೈಯುತ್ತಿದ್ದ ಇವರು ಮಾನಸಿಕವಾಗಿ ಖಿನ್ನತೆಯನ್ನು ಹೊಂದಿದ್ದು, ಮನೆಯಲ್ಲಿ ಬೆಳಗ್ಗೆ ಚಾ ಕುಡಿಯುವ ತಯಾರಿಯ ನಡುವೆ ಕಾಣೆಯಾಗಿದ್ದಾರೆ. ವಿಟ್ಲ ಭಾಗಕ್ಕೆ ಬಸ್ಸಿನಲ್ಲಿ ತೆರಳುವುದನ್ನು ಕಂಡವರಿದ್ದು ಬಳಿಕ ವಿಟ್ಲದಿಂದ ಯಾವ ಕಡೆಗೆ ತೆರಳಿದ್ದಾರೆಂಬುದು ತಿಳಿದಿಲ್ಲ.ಮೊಬೈಲ್ ಪೋನ್ ಮನೆಯಲ್ಲಿಯೇ ಇರಿಸಿದ್ದಾರೆ. ಯಾರಿಗಾದರೂ ಇವರ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದಲ್ಲಿ ಈ ಕೆಳಗಿನ ನಂಬ್ರವನ್ನು ಸಂಪರ್ಕಿಸಿರಿ 9778358176. ಈ ಬಗ್ಗೆ ಬದಿಯಡ್ಕ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.

0 Comments