Ticker

6/recent/ticker-posts

Ad Code

ನಿಷೇಧಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಧ್ಯವಯಸ್ಕನ ಬಂಧನ

 

ಬದಿಯಡ್ಕ : ನಿಷೇಧಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಧ್ಯವಯಸ್ಕನನ್ನು ಬದಿಯಡ್ಕ ಠಾಣಾ ಪೋಲಿಸರು ಬಂಧಿಸಿದ್ದಾರೆ. ನೀರ್ಚಾಲ್ ಸಮೀಪದ ಪುದುಕೋಳಿಯ ತಿಮ್ಮಪ್ಪ (58) ಬಂಧಿತ ವ್ಯಕ್ತಿ. ನೀರ್ಚಾಲು ಮೇಲಿನ ಪೇಟೆಯ ಅಂಗಡಿಯೊಂದರ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾಗ ವಿವಿಧ ರೀತಿಯ ತಂಬಾಕು ಉತ್ಪನ್ನಗಳ ಸಹಿತ 75 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನಂತರ ಠಾಣೆಗೆ ಕರೆದೊಯ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Post a Comment

0 Comments