ಮುಳ್ಳೇರಿಯ: ಅವರಣವಿಲ್ಲದ ಬಾವಿಗೆ ಬಿದ್ದ ರೀತಿಯಲ್ಲಿ ಮಧ್ಯವಯಸ್ಕರೋರ್ವರ ಮೃತದೇಹ ತೋಟವೊಂದರ ಬಾವಿಯಲ್ಲಿ ಕಂಡು ಬಂದಿದೆ. ಮುಳಿಯಾರು ಮುಂಡಕೈ ಕೆ.ಕೆ.ವಳಪ್ಪಿನ ಎನ್.ಚಂದ್ರನ್ (50) ಮೃತ ವ್ಯಕ್ತಿ. ಬೋವಿಕ್ಕಾನದ ಕೈಲಾಸಂ ಆಡಿಟೋರಿಯಂನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಚಂದ್ರನ್ ಮನೆಗೆ ಹಿಂದಿರುಗುತ್ತಿದ್ದಾಗ ಸ್ವಲ್ಪ ದೂರದಲ್ಲಿರುವ ತನ್ನ ಸಂಬಂಧಿಕರ ತೋಟದಲ್ಲಿರುವ ಅಡಿಕೆ ತೋಟದ ಅವರಣವಿಲ್ಲದ ಬಾವಿಗೆ ಜಾರಿ ಬಿದ್ದಿರಬಹುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ನಿನ್ನೆ (ಶನಿವಾರ) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.ದಿ.ನಾರಾಯಣ- ಕಾರ್ತ್ಯಯಿನಿ ದಂಪತಿಗಳ ಪುತ್ರನಾದ ಮೃತರು ಪತ್ನಿ ರೇಷ್ಮಾ, ಮಕ್ಕಳಾದ ಶಿವನ್ಯ,ಶಿವಧ್ಯಾನ್ ಹಾಗೂ ಸಹೋದರ ಗಂಗಾಧರ,ಸಹೋದರಿ ಲೀಲಾ ಎಂಬಿವರನ್ನಗಲಿದ್ದಾರೆ.

0 Comments