Ticker

6/recent/ticker-posts

Ad Code

ತೋಟದ ಕೆಲಸದ ನಡುವೆ ಕುಸಿದು ಬಿದ್ದು ಮಧ್ಯ ವಯಸ್ಕ ಮೃತ್ಯು

 


ಮುಂಡಿತ್ತಡ್ಕ: ಮುಗು ನಿವಾಸಿ ಪಿ.ಅಬ್ದುಲ್ ಖಾದರ್ (55) ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಿನ್ನೆ ಶೇಣಿ ಸಮೀಪದ ಏಳ್ಕಾನ ಎಂಬಲ್ಲಿ ತೋಟಗಾರಿಕೆ ಕೆಲಸದ ನಡುವೆ  ಕುಸಿದು ಬಿದ್ದಿದ್ದರು. ಕೂಡಲೇ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಮೃತರು ಪತ್ನಿ ಖೈರುನ್ನೀಸಾ ಪುತ್ರ ಸಿಬಿ, ಹಾಗೂ ಸಹೋದರರಾದ ಮುಹಮ್ಮದ್, ಹಮೀದ್,ಸಹೋದರಿ  ಅಲಿಮಾ ಎಂಬಿವರನ್ನಗಲಿದ್ದಾರೆ.

Post a Comment

0 Comments