ಬದಿಯಡ್ಕ : ಪಂಚಾಯತು ಅಧಿಕಾರದ ಮರೆಯಲ್ಲಿ ಕ್ರಮ ವಿರುದ್ಧವಾಗಿ ಕುಟುಂಬಶ್ರೀ ಚುನಾವಣೆ ನಡೆಸುವಲ್ಲಿ ಜೊತೆಗೂಡಿದ್ದು, ಸಿಡಿಎಸ್ ಚುನಾವಣೆ ನಡೆಸಲು ಬಿಜೆಪಿಯ ಪಂಚಾಯತು ಸಮಿತಿ ಕಚೇರಿಯನ್ನು ವೇದಿಕೆಯನ್ನಾಗಿಸಿದ್ದು ಅನೀತಿಯಾಗಿದೆ ಎಂದು ಯುಡಿಎಫ್ ನೇತಾರರ ಸಭೆ ಆರೋಪಿಸಿದೆ. ವಿವಿಧ ವಾರ್ಡುಗಳ ರಾಜಕೀಯರಹಿತ ಸಿಡಿಎಸ್ ಸದಸ್ಯೆಯರನ್ನು ಹೆದರಿಸಿಯೂ, ಪ್ರೇರೇಪಿಸಿಯೂ ಹಲವು ವಾರ್ಡುಗಳ ಎಡಿಎಸ್ ಆಡಳಿತ ಸಮಿತಿಯನ್ನು ಬಿಜೆಪಿ ತಮಗೆ ಅನುಕೂಲವಾಗುವಂತಾಗಿಸಿದ್ದು. ಜಯ ಗಳಿಸಿದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯ ಭಾವಚಿತ್ರದೊಂದಿಗೆ ಪಾರ್ಟಿಯ ಚಿಹ್ನೆ ಉಪಯೋಗಿಸಿ ಪಂಚಾಯತು ಅಧ್ಯಕ್ಷರೂ, ಸದಸ್ಯರೂ ಸ್ಟೇಟಸ್ ಹಾಕಿದ್ದೂ ಪ್ರಚಾರ ಮಾಡಿದ್ದೂ ನಿಯಮ ವಿರುದ್ಧವೂ ಕುಟುಂಬಶ್ರೀ ಸಂವಿಧಾನಕ್ಕೆ ನಾಚಿಕೆಗೇಡೆಂದೂ ಯುಡಿಎಫ್ ಆರೋಪಿಸಿದೆ. ಕುಟುಂಬಶ್ರೀಯ ಮತ ಪಟ್ಟಿಯಲ್ಲಿದ್ದ ಒಕ್ಕೂಟಗಳಿಗೆ ಸ್ಪರ್ಧಿಸಲು ಅವಕಾಶ ನೀಡದಿರುವುದು ಅನೀತಿಯಾಗಿದೆಯೆಂದೂ ಆರೋಪವಿದೆ. ಕುಟುಂಬಶ್ರೀಯ ವಾರ್ಡು ಮಟ್ಟದ ಮತ ಪಟ್ಟಿಗಳಲ್ಲಿ ಹತ್ತಿರದ ವಾರ್ಡುಗಳ ಸದಸ್ಯರನ್ನೊಳಪಡಿಸಿ ಕ್ರಮಕೇಡು ನಡೆಸಿದ್ದಾಗಿಯೂ ದೂರುಗಳಿವೆ. ಮೇಲೆ ಹೇಳಿದ ವಿಷಯಗಳನ್ನೆಲ್ಲ ಮಂಡಿಸಿಕೊಂಡು ರಾಜ್ಯ ಕುಟುಂಬಶ್ರೀ ಮಿಷನಿಗೂ , ಜಿಲ್ಲಾಧಿಕಾರಿ ಹಾಗೂ ನ್ಯಾಯಾಲಯಕ್ಕೂ ದೂರು ನೀಡಲು ಯುಡಿಎಫ್ ಪಂಚಾಯತು ಸಮಿತಿ ತೀರ್ಮಾನಿಸಿದೆ.
.jpeg)
0 Comments