Ticker

6/recent/ticker-posts

Ad Code

ಐಟಿಐ ಕ್ಲಾಸಿಗೆಂದು ಹೋದ ಯುವತಿ ವಿವಾಹಿತಳಾಗಿ ಪ್ರಿಯಕರನೊಂದಿಗೆ ಠಾಣೆಗೆ ಹಾಜರು


ಕಾಸರಗೋಡು: ಐಟಿಐ ಕ್ಲಾಸಿಗೆಂದು  ಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮತ್ತು ಆಕೆಯ ಪ್ರಿಯಕರ ಪರಸ್ಸಿನಿಕಡವು ದೇವಸ್ಥಾನದಲ್ಲಿ ವಿವಾಹವಾಗಿ ಪೋಲಿಸ್ ಠಾಣೆಗೆ ಹಾಜರಾಗಿದ್ದಾರೆ. ನೀರ್ಚಾಲು ಸಮೀಪದ ಮೆಣಸಿನಪ್ಪಾರೆಯ ಪುಷ್ಪಲತಾ ಅವರ ಪುತ್ರಿ ಕೆ. ಯಜ್ಞಶ್ರೀ (20) ಮತ್ತು ಕಾಸರಗೋಡು ಸಮೀಪದ ನೆಲ್ಲಿಕುನ್ನು ಹಿತೇಶ್  ಎಂಬ ಜೋಡಿ ಪರಾರಿಯಾಗಿ  ಗುರುವಾರ ವಿವಾಹವಾದರು.  ಯಜ್ಞಶ್ರೀ ಸೀತಾಂಗೋಳಿ ಐಟಿಐ ವಿದ್ಯಾರ್ಥಿನಿ. ಗುರುವಾರ ಬೆಳಿಗ್ಗೆ ಎಂದಿನಂತೆ ಐಟಿಐಗೆ ಹೋಗಿದ್ದಳು. ಆದರೆ, ತರಗತಿಗೆ ಹೋಗುವ ಬದಲು, ಕುಂಬಳೆ ರೈಲು ನಿಲ್ದಾಣ ತಲುಪಿ ಕಣ್ಣೂರಿಗೆ ಹೋಗುವ ರೈಲು ಹತ್ತಿದ್ದಾಳೆ ಎಂದು ಆಕೆಯ ತಾಯಿ ಕುಂಬಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗ, ಯಜ್ಞಶ್ರೀ ಮತ್ತು ಹಿತೇಶ್ ನಡುವಿನ ವಿವಾಹವು ಪರಸ್ಸಿನಿಕಡವು ದೇವಸ್ಥಾನದಲ್ಲಿ ನಡೆದಿರುವುದು  ತಿಳಿದು ಬಂದಿತ್ತು.

Post a Comment

0 Comments