Ticker

6/recent/ticker-posts

Ad Code

ಹಿಂದೂ ಸಂಗಮಕ್ಕೆ ಹೋದವರ ಮನೆಗೆ ಕಲ್ಲು ತೂರಾಟ : ಎಣ್ಮಕಜೆಯ ಎಸ್.ಟಿ.ಉನ್ನತಿಯ ಹಿಂದೂ ಕಾರ್ಯಕರ್ತರ ಮನೆ ಸಂದರ್ಶಿಸಿ ಸಂತೈಸಿದ ಹಿಂದೂ ಮುಖಂಡ ಅಕ್ಷಯ್ ರಜಪೂತ್

ಪೆರ್ಲ : ಪೆರ್ಲದಲ್ಲಿ ನಡೆದ ಹಿಂದೂ ಸಮಾಜೋತ್ಸವಕ್ಕೆ  ಹೋದ ಎಣ್ಮಕಜೆ ಎಸ್.ಟಿ.ಉನ್ನತಿಯ ನಿವಾಸಿಗಳ ಮನೆಗೆ ಕಲ್ಲು ತೂರಾಟ ನಡೆಸಿದ ದುಷ್ಕ್ರತ್ಯ ಬೆಳಕಿಗೆ ಬಂದಿದೆ. ರಾತ್ರಿಯ ಮರೆಯಲ್ಲಿ ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದು ಎಣ್ಮಕಜೆ ಎಸ್.ಟಿ ಉನ್ನತಿಯ ಬಳ್ಳು ಅವರ ಮನೆಗೆ ಹಾನಿಯಾಗಿದೆ. ಇದನ್ನು ಅರಿತ ಹಿಂದೂ ಮುಖಂಡ ಅಕ್ಷಯ್ ರಜಪೂತ್ ಮತ್ತು ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ. ಅನಿಲ್ ಕುಮಾರ್ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಸಂತೈಸಿದ್ದು ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದ್ದಾರೆ. ಇಂತಹ ದುಷ್ಕೃತ್ಯಗಳು ಇನ್ನು ಮುಂದೆಯೂ ಮುಂದುವರಿದರೆ, ಅದೇ ರೀತಿಯಲ್ಲಿ ಉತ್ತರ ನೀಡಲು ಹಿಂದೂ ಸಮಾಜ ಸಿದ್ಧವಾಗಿದೆ ಎಂದು ಅಕ್ಷಯ್ ರಜಪೂತ್ ಎಚ್ಚರಿಕೆ ನೀಡಿದ್ದಾರೆ.

Post a Comment

0 Comments