Ticker

6/recent/ticker-posts

Ad Code

ಬಸ್-ಕಾರು ಡಿಕ್ಕಿ : ತಂದೆ ಸಾವು, ಮಗನಿಗೆ ಗಂಭೀರ ಗಾಯ

ಬದಿಯಡ್ಕ: ಬಸ್-ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು  ಗಂಭೀರ ಗಾಯಗೊಂಡ ಅವರ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೆಲ್ಲಿಕಟ್ಟೆ ಬಳಿಯ ಪೈಕದ ಶಂಸುದ್ದೀನ್ (65) ಮೃತಪಟ್ಟ ವ್ಯಕ್ತಿಯಾಗಿದ್ದು  ಈ ಹಿಂದೆ  ವಿದೇಶದಲ್ಲಿ ನೆಲೆಸಿದ್ದರು. ಅವರ ಮಗ ಸಲ್ಮಾನ್ ಫಾರಿಸ್  ಗಂಭೀರವಾಗಿ ಗಾಯಗೊಂಡಿದ್ದು,  ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಶನಿವಾರ) ಬೆಳಿಗ್ಗೆ 6 ಗಂಟೆಗೆ ನೆಲ್ಲಿಕಟ್ಟೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾಸರಗೋಡಿನಿಂದ ಪುತ್ತೂರಿಗೆ ಹೋಗುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಪೈಕದಿಂದ ಕಾಸರಗೋಡಿಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಬಸ್ಸಿಗೂ ಹಾನಿಯಾಗಿದೆ. ಸ್ಥಳೀಯರು ಮತ್ತು ಕಾಸರಗೋಡಿನ ಅಗ್ನಿಶಾಮಕ ದಳದವರು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಪತ್ನಿ ರಹೀಮಾ ಶಂಸುದ್ದೀನ್, ಮಕ್ಕಳಾದ ರಶೀದ್, ಅರಾಫತ್, ಫಾತಿಮಾ ಮತ್ತು ಸಹಾದ್  ಸಾರಾ, ಸಹೋದರ,  ಸಹೋದರಿಯರು  ಮರ್ಯಮ್ ಮತ್ತು ಖಾಲಿದ್ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments