Ticker

6/recent/ticker-posts

Ad Code

ಅತ್ತೆಯ ಅಂತ್ಯಕ್ಕೆ ನೂರು ರೂಪಾಯಿ‌ ನೋಟಿನ ಜತೆ ವಿಚಿತ್ರ ಪ್ರಾರ್ಥನೆಯ ಕಾಣಿಕೆ...!

ಬೆಳಗಾವಿ : ವಿವಿಧ ಆಸೆಗಳನ್ನು ಈಡೇರಿಸಲು ಭಕ್ತರು ದೇವರಲ್ಲಿ ಪ್ರಾರ್ಥಿಸುವುದನ್ನು ನಾವು ಕಂಡಿರುತ್ತೇವೆ. ಆದರೆ ಇಲ್ಲೊಂದು ಪ್ರಾರ್ಥನೆ ವಿಚಿತ್ರ ಮತ್ತು ವಿಸ್ಮಯತೆಯನ್ನು ಮೂಡಿಸಿದೆ. ಭಕ್ತೆಯೊಬ್ಬಳು ನೂರು ರೂಪಾಯಿ ನೋಟಿನಲ್ಲಿ ತನ್ನ ಮನದಾಳದ ನಿವೇದನೆ ಬರೆದು ದೇವರ ಕಾಣಿಕೆ ಡಬ್ಬಿಗೆ ಅರ್ಪಿಸಿದ ವಿಚಿತ್ರ ಘಟನೆ ನೆರೆದವರನ್ನು‌ಮೂಕ ವಿಸ್ಮಿತರನ್ನಾಗಿಸಿದೆ.

 ಕರ್ನಾಟಕದ ಬೆಳಗಾವಿ ಜಿಲ್ಲೆಯ  ಮುಗಳಕೋಡ್  ಸಮೀಪದ ಖಾಂಡಾಲ ಎಂಬಲ್ಲಿನ‌ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾಣಿಕೆ ಡಬ್ಬಿಯನ್ನು ಮನೆಯಲ್ಲಿ ಇರಿಸಲು ಭಕ್ತರಿಗೆ ನೀಡಲಾಗುತ್ತಿದೆ. ಹೀಗೆ ವಿತರಿಸಿದ ಕಾಣಿಕೆ ಡಬ್ಬಿಯಲ್ಲಿ ಭಕ್ತರು ತಮ್ಮ‌ಮನದಾಳದ ನೋವನ್ನು ನಿವಾರಿಸಲು ಪ್ರಾರ್ಥಿಸಿ ಕಾಣಿಕೆ ಅರ್ಪಿಸಿದರೆ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದು. ಹೀಗೆ ಅರ್ಪಿಸಿದ ಕಾಣಿಕೆ ಡಬ್ಬಿಗಳನ್ನು ಕ್ಷೇತ್ರದ ಜಾತ್ರಾ ಸಂದರ್ಭದಲ್ಲಿ ತಂದು ತೆರೆಯಲಾಗುತ್ತಿದೆ. ಈ ಬಾರಿ ಕಾಣಿಕೆ ಡಬ್ಬಿಯೊಂದನ್ನು‌ ತೆರೆದಾಗ ಅದರಲ್ಲಿದ್ದ ನೂರರ ನೋಟಿನ ಜತೆ ಬರೆದ ಪ್ರಾರ್ಥನೆ  ಹೀಗಿತ್ತು "ನನಗೆ ಕಿರುಕುಳ ಸಹಿಸಲಾಗುತ್ತಿಲ್ಲ, ಮುಂದಿನ ವಾರ್ಷಿಕಕ್ಕೂ ಮುನ್ನ ನನ್ನ ಅತ್ತೆಯನ್ನು ಮೇಲೆ  ಕರೆಸಿಕೋ ಎಂದು  ಬಯಸುತ್ತೇನೆ" 

ಬರೆದ ಪ್ರಾರ್ಥನೆಯನ್ನು ನೂರು ರೂಪಾಯಿ ನೋಟಿನೊಂದಿಗೆ ಸುತ್ತಿ ಡಬ್ಬಿಯಲ್ಲಿ ಇರಿಸಲಾಗಿತ್ತು. ವಿಚಿತ್ರ ವಿನಂತಿಯ ಪ್ರಾರ್ಥನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.  ದೇವಾಲಯದ ಅಧಿಕಾರಿಗಳು ಮತ್ತು ಸ್ಥಳೀಯರು ಗೊಂದಲಕ್ಕೊಳಗಾಗಿದ್ದಾರೆ. ಅತ್ತೆಯ ಚಿತ್ರಹಿಂಸೆಯನ್ನು ಸಹಿಸಲಾಗದ ಸೊಸೆ ಅಥವಾ ಅಳಿಯ ಇಂತಹ ಕಠಿಣ ಕ್ರಮ ಕೈಗೊಂಡರೋ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿ ಉತ್ಸವವನ್ನು ವರ್ಷಗಳಿಂದ ನಡೆಸಲಾಗುತ್ತಿದೆ, ಆದರೆ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಹಿಂದೆ, ಮನೆಯಲ್ಲಿರುವ ಎಲ್ಲರೂ ನೂರು ವರ್ಷಗಳ ಕಾಲ ಸಂತೋಷದಿಂದ ಒಟ್ಟಿಗೆ ಬದುಕಬೇಕೆಂದು ಜನರು ಪ್ರಾರ್ಥಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ, ಅತ್ತೆಯ ಸಾವಿಗೆ ಪ್ರಾರ್ಥಿಸುವುದು ವಿಚಿತ್ರ ಪರಿಸ್ಥಿತಿಯಾಗಿದೆ.

Post a Comment

0 Comments