Ticker

6/recent/ticker-posts

Ad Code

ಮಸ್ತಿಷ್ಕ ಆಘಾತಕ್ಕೊಳಗಾಗಿ ಬೇಕರಿ ಮಾಲಕ ನಿಧನ

 

ಕುಂಬಳೆ: ಮಿದುಳಿಗೆ ರಕ್ತ ಸಂಚಾರವಾಗದೇ ಉಂಟಾದ ಮಸ್ತಿಷ್ಕ ಆಘಾತದಿಂದ ಬೇಕರಿ ಮಾಲಕರೊಬ್ಬರು ಮೃತಪಟ್ಟರು. ಮೊಗ್ರಾಲ್ ಜಾಸ್ ಬೇಕರಿ ಮಾಲಕ ಹಾಗೂ ಮೊಗ್ರಾಲಿನ ಕಡವತ್ತಿನ ನಡುಪಳ್ಳಂ ನಿವಾಸಿ ಅಬ್ದುಲ್ ಅಝೀಝ್ (44) ಮೃತ ವ್ಯಕ್ತಿಯಾಗಿದ್ದಾರೆ.

ಸೋಮವಾರ ಮುಂಜಾವ ಆಹಾರ ಸೇವಿಸಿ ಮಸೀದಿಗೆ ಹೊರಡುವಾಗ ಇವರು ಕುಸಿದು ಬಿದ್ದಿದ್ದರು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ವೆಂಟಿಲೇಟರಿನಲ್ಲಿಟ್ಟಿದ್ದರೂ ರಾತ್ರಿ ವೇಳೆಗೆ ಮೃತರಾದರು. ಮೊಗ್ರಾಲ್ ನಲ್ಲಿ ಜಾಸ್ ಬೇಕರಿ ಮತ್ತು ಹಣ್ಣುಹಂಪಲು ಅಂಗಡಿ ನಡೆಸುತ್ತಿದ್ದ ಇವರು ಸಕ್ರಿಯ ಮುಸ್ಲಿಂಲೀಗ್ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಷಂಸೀನ ಹಾಗೂ ಮೂವರು ಮಕ್ಕಳು ಮತ್ತು ಕುಟುಂಬವನ್ನಗಲಿದ್ದಾರೆ.

Post a Comment

0 Comments