Ticker

6/recent/ticker-posts

Ad Code

ಟೈಲ್ಸ್ ಕಾರ್ಮಿಕನಾದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ : ಟೈಲ್ಸ್ ಕಾರ್ಮಿಕನಾದ ಯುವಕನೋರ್ವನ ಮೃತದೇಹ  ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ.  ಮೃತ ಯುವಕ  ಪಿಲಾಂಕಟ್ಟೆಯ   ದಿ. ರಘುರಾಮ ಆಚಾರ್ಯ ಮತ್ತು ರಾಧಾ ದಂಪತಿಯ ಪುತ್ರ ಚಂದ್ರಶೇಖರ ಆಚಾರ್ಯ (30) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಚಂದ್ರಶೇಖರ ತನ್ನ ಮನೆಯ ಅಡುಗೆ ಮನೆಯಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಗಲೇ ಮೃತಪಟ್ಟಿದ್ದರು. ನಿನ್ನೆ ಕೆಲಸಕ್ಕೆ ರಜೆ ಮಾಡಿ ಮಧೂರಿನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂತಿರುಗಿದ ಈತನ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.  ಅವಿವಾಹಿತನಾದ ಈತ  ಸಹೋದರಿಯರಾದ ರಾಧಿಕಾ, ಚಂದ್ರಿಕಾ, ರೇಣುಕಾ, ಚಂದ್ರಕಲಾ, ಚಂದ್ರಪ್ರಭಾ,ಸಹೋದರ ಚಂದ್ರಕಾಂತ, ಚಂದ್ರಹಾಸ ಎಂಬಿವರನ್ನಗಲಿದ್ದಾನೆ. ಬದಿಯಡ್ಕ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು  ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Post a Comment

0 Comments