Ticker

6/recent/ticker-posts

Ad Code

ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಶರಣಾದ ಯೂಟ್ಯೂಬರ್

 

ಹೈದರಾಬಾದ್: ಬಿಎಸ್ಸಿ ಪದವೀಧರೆಯಾಗಿರುವ 21 ವರ್ಷದ ಯೂಟ್ಯೂಬರ್‌ ಬೋನು ಕೋಮಲಿ ಇತ್ತೀಚೆಗೆ ಹೈದರಾಬಾದ್‌ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದಾರೆ. ಆತ್ಮಹತ್ಯೆಗೆ ಮುನ್ನ  ಕುವೈತ್‌ನಲ್ಲಿರುವ ತನ್ನ ತಾಯಿಗೆಸಂದೇಶ ಕಳುಹಿಸಿರುವುದಾಗಿ ತಿಳಿದು  ಬಂದಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಂ ನಿವಾಸಿಯಾಗಿರುವ  ಕೋಮಲಿ, ಹೈದರಾಬಾದ್‌ನ  ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, 11 ತಿಂಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಶಿಕ್ಷಣದ ಜೊತೆಗೆ ಯೂಟ್ಯೂಬ್‌ನಲ್ಲಿ ಲೈಫ್‌ಸ್ಟೈಲ್‌ ಮತ್ತು ವೈಯಕ್ತಿಕ ವಿಷಯಗಳ ಕುರಿತು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು.

ಪೊಲೀಸರ ಪ್ರಕಾರ,  ಸೋಮವಾರ ಮುಂಜಾನೆ ಕೋಮಲಿ ಕುವೈತ್‌ನಲ್ಲಿ  ಕೆಲಸ ಮಾಡುತ್ತಿರುವ ತನ್ನ ತಾಯಿ ಬಿ ಸತ್ಯ ವರಲಕ್ಷ್ಮಿಗೆ ʻಐ ಲವ್ ಯು ಮಾಮ್ ಸೋ ಮಚ್ʼ ಎಂದು ಸಂದೇಶ ಕಳುಹಿಸಿದ್ದಾರೆ. ಜೊತೆಗೆ ತನ್ನ ಕಿರಿಯ ಸಹೋದರನನ್ನು  ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಮೆಸೇಜ್‌ ಕಳುಹಿಸಿದ ಬಳಿಕ ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ತಿರುಗಿ ಎಷ್ಟು ಕರೆ ಮಾಡಿದರೂ  ಸಂಪರ್ಕಕ್ಕೆ ಸಿಗದ ಕಾರಣ ಕೋಮಲಿ ತಾಯಿ ಮಧ್ಯಾಹ್ನ ತನ್ನ ಫ್ಲಾಟ್‌ಗೆ ಬಂದು ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ನಂತರ ಫೆ.23 ರ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಮಲಿ ಫ್ಲಾಟ್‌ ಬಳಿ ಬಂದು ಬಾಗಿಲು ಬಡಿದಿದ್ದಾರೆ. ಬಹಳ ಹೊತ್ತು ಯಾವುದೇ ಪ್ರತಿಕ್ರಿಯೆ ಬರದೇ ಇದ್ದುದರಿಂದ  ಬೀಗ ಒಡೆದು ಒಳಗೆ ಹೋಗಿದ್ದಾರೆ. ಆಗ  ಸೀಲಿಂಗ್‌ ಫ್ಯಾನ್‌ಗೆ  ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಶವ ನೇತಾಡುತ್ತಿದ್ದದ್ದು ಅವರಿಗೆ  ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಒಂದು ಏಣಿ ಮತ್ತು ಸೀರೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ದೀರ್ಘಕಾಲದಿಂದ ಆಕೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಕೋಮಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಸಹ ಯೂಟ್ಯೂಬರ್ ಜೊತೆ 3 ವರ್ಷಗಳ ಕಾಲ ಸಂಬಂಧದಲ್ಲಿದ್ದಳು. ನಂತರ ಇಬ್ಬರು ಬೇರ್ಪಟ್ಟಿದ್ದರು. 6 ತಿಂಗಳ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದಳು. ಎಂಬುದಾಗಿ ತಿಳಿದುಬಂದಿದೆ.  ಇದೀಗ  ಅನುಮಾನಾಸ್ಪದ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶವ ಪರೀಕ್ಷೆಗಾಗಿ ಕೋಮಲಿ ಮೃತದೇಹವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Post a Comment

0 Comments