ಮಂಜೇಶ್ವರ : ಪ್ರೇಮಿಗಳಿಬ್ಬರನ್ನು ಬೆದರಿಸಿ ನಗ್ನ ಚಿತ್ರ ತೆಗೆಸಿ ನೈತಿಕ ಗೂಂಡಾಗಿರಿ ಎಸಗಿದ್ದಲ್ಲದೇ ಬಂಧಿಸಲು ಬಂದ ಮಹಿಳಾ ಪೊಲೀಸ್ ಸಿಬ್ಬಂದಿಯ ಕೈಬೆರಳು ಮುರಿದು ಓಡಿ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಮುಂಜಾನೆ ಬಂಧಿಸಲಾಗಿದೆ.
ಮಂಜೇಶ್ವರ ಹೊಸಬೆಟ್ಟು ನಿವಾಸಿ ಮೊಯ್ನುದ್ದೀನ್ ಸಮಯ್ (33)ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಮಂಜೇಶ್ವರ ಪೋಲೀಸರು ಫೆ. 26ರಂದು ಮುಂಜಾನೆ ಮಂಗಳೂರಿನ ಕಲ್ಲಾಪು ತರಕಾರಿ ಮಾರ್ಕೆಟ್ ನಿಂದ ಬಂಧಿಸುವಲ್ಲಿ ಸಫಲರಾದರು. ಹೊಸಂಗಡಿಯ ಲಾಡ್ಜ್ ಒಂದರಲ್ಲಿ ಮಹಿಳೆ ಮತ್ತು ಪುರುಷನೋರ್ವನನ್ನು ಜತೆ ನಿಲ್ಲಿಸಿ ಬೆತ್ತಲೆ ಫೋಟೋ, ವೀಡಿಯೋ ತೆಗೆದು ಹಣ ನೀಡುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಈತ ಪ್ರಧಾನ ಆರೋಪಿಯೆಂದು ಪೊಲೀಸರು ಹೇಳಿದ್ದಾರೆ. ಬಂಧನಕ್ಕಾಗಿ ತೆರಳಿದ್ದ ವೇಳೆ ಆರೋಪಿ ಮಹಿಳಾ ಪೊಲೀಸ್ ಬೆರಳು ಮುರಿದು ಪರಾರಿಯಾಗಿದ್ದ.
.jpeg)
0 Comments