Ticker

6/recent/ticker-posts

Ad Code

ಕಾಸರಗೋಡು ಜಿಲ್ಲೆಯಿಂದ ಪ್ರತ್ಯೇಕ‌ ಪ್ರಕರಣದಲ್ಲಿ ಇಬ್ಬರು ಯುವತಿಯರು ನಾಪತ್ತೆ : ಒಬ್ಬಾಕೆ ವಿವಾಹಿತಳಾಗಿ ಹಾಜರು, ಮತ್ತೋರ್ವೆಯ ಹುಡುಕಾಟ ಚುರುಕು

ಕಾಸರಗೋಡು : ಒಂದೇ ದಿನ ಇಬ್ಬರು ಯುವತಿಯರು  ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಅವರಲ್ಲಿ ಒಬ್ಬಳು ತನ್ನ ಪ್ರಿಯಕರನನ್ನು ಮದುವೆಯಾದ ನಂತರ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ. ವೆಲ್ಲರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಮ್ ನ ಪಿ.ಕೆ. ಮಧು ಎಂಬವರ ಮಗಳು ಬೀನಾ (19) ತನ್ನ ಪ್ರಿಯಕರ ರಂಜಿತ್ ಜೊತೆ ಓಡಿಹೋಗಿ ವಿವಾಹವಾಗಿರುವುದಾಗಿ ತಿಳಿಸಿದ್ದಾಳೆ. ಮಂಗಳವಾರ ಸಂಜೆ ಬೀನಾ ನಾಪತ್ತೆಯಾಗಿದ್ದಳು. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ವೆಲ್ಲರಿಕುಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿರುವಾಗ, ಬೀನಾ ಬುಧವಾರ ಮಧ್ಯಾಹ್ನ ಪೊಲೀಸ್ ಠಾಣೆಗೆ ತಲುಪಿದಳು.  ಆಕೆಯ ಪ್ರಿಯಕರ ರಂಜಿತ್ ಕೂಡ ಆಕೆಯ ಜೊತೆಗಿದ್ದು ದೇವಸ್ಥಾನದಲ್ಲಿ ತಾಳಿ ಕಟ್ಟುವ  ಮೂಲಕ ತಾವು ಮದುವೆಯಾಗಿರುವುದಾಗಿ  ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಸ್ವ ಇಚ್ಛೆಯಂತೆ  ಇರಲು ತಿಳಿಸಲಾಯಿತು. ಬಳಿಕ ಬೀನಾ ತನ್ನ ಪ್ರಿಯಕರನೊಂದಿಗೆ ತೆರಳಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಇದೇ ರೀತಿಯ ಇನ್ನೊಂದು ಪರಾರಿ ಪ್ರಕರಣ  ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪುತಿಯಪುರಕ್ಕಲ್ಲಿನ ಚೆಮ್ಮಟ್ಟಂವಯಲ್‌ನ ಸುನಿಲ್ ಲಾರೆನ್ಸ್ ಅವರ ಪುತ್ರಿ ಅಲೀನಾ (22) ಬುಧವಾರ ನಾಪತ್ತೆಯಾಗಿದ್ದಾಳೆ. ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದ ಆಕೆ, ಹಿಂತಿರುಗಲಿಲ್ಲ,  ಪಾಲಕ್ಕಾಡ್ ಮೂಲದ ಸಂದೀಪ್ ಜೊತೆ ಹೋಗಿದ್ದಾಳೆ ಎಂದು ಸಂಶಯಿಸಲಾಗಿದ್ದು ಪೋಲಿಸರಿಗೆ ಮನೆಯವರು ದೂರು ನೀಡಿದ್ದಾರೆ..

Post a Comment

0 Comments