Ticker

6/recent/ticker-posts

Ad Code

ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಪನ್ನ

ಪೆರ್ಲ : ಕಾಟುಕುಕ್ಕೆ ಸಮೀಪದ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು. ಇದರ ಅಂಗವಾಗಿ ದ್ವಾದಶ ನಾರಿಕೇಳ ಗಣಪತಿ ಹವನ, ಸೀಯಾಳಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ದೈವಗಳ ಆರಾಧನೆ, ಸೋಮವಾರ ಬೆಳಗ್ಗೆ ಚಂಡಿಕಾ ಹವನ, ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ವಿಶೇಷ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆ ಪೂಜೆ, ಸುಡು ಮದ್ದು ಪ್ರದರ್ಶನ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಮಂಗಳವಾರ ಮಹಾಪೂಜೆ, ಮಂತ್ರಾಕ್ಷತೆ ಬೆಳಗ್ಗೆ ನವಕ ಕಲಶಾಭಿಷೇಕ, ಅವಭೃತ ಸ್ನಾನದೊಂದಿಗೆ ಉತ್ಸವ ಸಮಾಪ್ತಿಗೊಂಡಿತು.

Post a Comment

0 Comments