Ticker

6/recent/ticker-posts

Ad Code

ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕಾಗಿ ಚಪ್ಪರ ಮುಹೂರ್ತ

 

ಪೆರ್ಲ :  ಇತಿಹಾಸ ಪ್ರಸಿದ್ಧ  ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಗುರುವಾರ (ಇಂದು) ಪೂರ್ವಾಹ್ನ ಜರಗಿತು. ಶ್ರೀಕ್ಷೇತ್ರದ ದೇವರ ಮುಂಭಾಗ ಶುಭ ಪ್ರಾರ್ಥನೆ ನೆರೆವೇರಿಸಿದ ಬಳಿಕ ಅಂಗಣಕ್ಕೆ ಹಾರೆ ಹಾಕಿ ಶುಭ ಮುಹೂರ್ತದಲ್ಲಿ ಚಪ್ಪರ ಕಂಬ ಏರಿಸಲಾಯಿತು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ರೈ ಮೇಗಿನ ಕಡಾರು, ಪ್ರಧಾನ ಕಾರ್ಯದರ್ಶಿ ಮಹೇಶ ಗುತ್ತು, ಕೋಶಾಧಿಕಾರಿ ಗೋಪಾಲಕೃಷ್ಣ ಶರ್ಮ ಸರವು, ವಿವಿಧ ಸಮಿತಿ ಪದಾಧಿಕಾರಿಗಳು, ಸ್ವಯಂ ಸೇವಕ ಕಾರ್ಯಕರ್ತರು, ಭಕ್ತಾಧಿಗಳು ಉಪಸ್ಥಿತರಿದ್ದರು. 

ಇದೇ ಬರುವ ಮಾರ್ಚ್ 29 ರಿಂದ ಎಪ್ರಿಲ್ 3ನೇ ತಾರೀಕಿನವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ  ಜರಗಲಿದೆ.

Post a Comment

0 Comments