ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಜನಪ್ರಿಯ ಯುವ ವಿಜ್ಞಾನಿ ಕಾರ್ಯಕ್ರಮ 'ಯುವಿಕಾ 2026' ಅನ್ನು ಘೋಷಿಸಿದೆ. ಈ ಕಾರ್ಯಕ್ರಮವು 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅವುಗಳ ಅನ್ವಯಗಳ ಬಗ್ಗೆ ಮೂಲಭೂತ ಜ್ಞಾನವನ್ನು ಒದಗಿಸುವ ಗುರಿ ಹೊಂದಿದೆ. ನಿಮ್ಮ ಮಗುವಿಗೆ ಬಾಹ್ಯಾಕಾಶ, ರಾಕೆಟ್ ತಂತ್ರಜ್ಞಾನ ಮತ್ತು ವಿಜ್ಞಾನದೆ ಜಗತ್ತಿನಲ್ಲಿ ಆಸಕ್ತಿ ಇದ್ದರೆ, ಅದಕ್ಕೊಂದು ಉತ್ತಮ ಅವಕಾಶ ಇದಾಗಿದೆ. ಫೆ. 27ರಿಂದ ನೋಂದಣಿ ಆರಂಭವಾಗಿದ್ದು ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿದೆ.
ಇಸ್ರೋದ ಯುವಿಕಾ ಕೋರ್ಸ್ ಜನವರಿ 1ರ ಹೊತ್ತಿಗೆ ಭಾರತದ ಮಾನ್ಯತೆ ಪಡೆದ ಶಾಲೆಯಲ್ಲಿ 9ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು jigyasa.irs.gov.in/yuvika/# ವೆಬ್‌ಸೈಟ್ ಗೆ ಭೇಟಿ ನೀಡಿ, 'ಯುವಿಕಾ ನೋಂದಣಿಗೆ ಅರ್ಜಿ ಸಲ್ಲಿಸು' ಲಿಂಕ್ ಕ್ಲಿಕ್ ಮಾಡಬೇಕು.ರಿಜಿಸ್ಟರ್ ಲಿಂಕ್ ಅನ್ನು ಕ್ಲಿಕ್ ಮಾಡಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ, ಲಾಗಿನ್ ರುಜುವಾತುಗಳನ್ನು ನಮೂದಿಸುವ ಮೂಲಕ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಏಪ್ರಿಲ್ 13ಕ್ಕೆ ಮೊದಲ ಆಯ್ಕೆ ಪಟ್ಟಿ ಪ್ರಕಟಣೆಗೊಳ್ಳಲಿದ್ದು, ಏಪ್ರಿಲ್ 20ಕ್ಕೆ ಎರಡನೇ ಆಯ್ಕೆ ಪಟ್ಟಿಯು ಪ್ರಕಟಗೊಳ್ಳುವುದು.

0 Comments