ಮುಳ್ಳೇರಿಯ : ಇಬ್ಬರು ಮಕ್ಕಳನ್ನು ಬಿಟ್ಟು ಹಾಸನ ಮೂಲದ ತನ್ನ ಪ್ರಿಯಕರನ ಜತೆ ಗೃಹಿಣಿಯೋರ್ವೆ ಪರಾರಿಯಾದ ಬಗ್ಗೆ ಪೋಲಿಸರಿಗೆ ದೂರಲಾಗಿದೆ.
ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಕಲ್ಲು ನಿವಾಸಿ ಲಲಿತಾ ಎಂಬವರ ಪುತ್ರಿ ಪ್ರೇಮ (35) ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ. ಸುಳ್ಯದ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಪ್ರೇಮ ನಂತರ ಹಿಂತಿರುಗಲಿಲ್ಲ. ತಾಯಿ ಲಲಿತಾ ನೀಡಿದ ದೂರಿನ ಮೇರೆಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ಬಳಿಕ ಪ್ರೇಮಾ ಮನೆಗೆ ಕರೆ ಮಾಡಿ ತಾನು ತನ್ನ ಪ್ರಿಯಕರ ಹಾಸನ ಮೂಲದ ಹರೀಶ್ ಜೊತೆ ಇದ್ದೇನೆ ಎಂದು ತಿಳಿಸಿದ್ದಾಳೆ. ಸಂಪಾಜೆ ಬಳಿಯ ಕಲ್ಲುಗುಂಡಿಯ ರುಕ್ಮಯ ಎಂಬವರಿಗೆ ಪ್ರೇಮಾಳನ್ನು ವಿವಾಹ ಮಾಡಿ ಕೊಡಲಾಗಿತ್ತು. ಇದೀಗ ಎರಡು ಮಕ್ಕಳನ್ನು ತನ್ನ ತಾಯಿ ಬಳಿ ಬಿಟ್ಟು ಪ್ರಿಯಕರನ ಜತೆ ಪರಾರಿಯಾಗುವುದರೊಂದಿಗೆ ಪ್ರೇಮ ಕಹಾನಿಗೆ ಅಂತ್ಯ ಹಾಡಿರುವುದು ವಿಪರ್ಯಾಸವಾಗಿದೆ.

0 Comments