Ticker

6/recent/ticker-posts

Ad Code

ವಿದೇಶದಿಂದ ಮರಳಿದ ಪೆರ್ಲದ ಟೈಲರ್ ವೆಂಕಟೇಶ್ ಆಚಾರ್ಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 


ಪೆರ್ಲ : ಪೆರ್ಲದಲ್ಲಿ ದರ್ಜಿ ವೃತ್ತಿಗೈಯುತ್ತಾ  ಜನಾನುರಾಗಿಯಾಗಿದ್ದ ಟೈಲರ್ ವೆಂಕಟೇಶ್ ಆಚಾರ್ಯ (49) ಮೃತದೇಹ ಮನೆ ಸಮೀಪ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದೆರಡು ವರ್ಷಗಳ ಹಿಂದೆ ವಿದೇಶಕ್ಕೆ ಕೆಲಸಕ್ಕಾಗಿ ತೆರಳಿದ್ದು ಮೂರು ದಿನಗಳ ಹಿಂದೆಯಷ್ಟೆ ಮರಳಿದ್ದರು ಎನ್ನಲಾಗಿದೆ. ನಿನ್ನೆ ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ಸಂದರ್ಶಿಸಿದ್ದರು. ರಾತ್ರಿ ಊಟ ಮಾಡಿ ಮಲಗಿದ ಇವರು ಇಂದು ಬೆಳಗ್ಗೆ ಜಾಗಿಂಗ್ ಹೋಗುವ ರೀತಿಯಲ್ಲಿ ಮನೆಯಿಂದ ಎದ್ದು ತೆರಳಿದ್ದಾರೆ ಎನ್ನಲಾಗಿದೆ. ಬಳಿಕ ಮೃತದೇಹ ಮನೆ ಸಮೀಪ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ದಿ.ಅಪ್ಪಯ್ಯ ಆಚಾರ್ಯರ ಪುತ್ರರಾದ ವೆಂಕಟೇಶ್ ಬಾಲ್ಯದಿಂದಲೇ ಆರೆಸ್ಸಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡವರು. ಟೈಲರಿಂಗ್ ವೃತ್ತಿ ಕಲಿತ ಇವರು ಬಳಿಕ ಬೊಂಬೈ,ಬೆಂಗಳೂರು, ದುಬೈ ಸಹಿತ ವಿವಿದೆಡೆ ಕೆಲಸ ನಿರ್ವಹಿಸಿದ್ದರು. ಪೆರ್ಲದ ಕೆ.ಕೆ.ರೋಡಿನಲ್ಲಿ ಟೈಲರಿಂಗ್ ಅಂಗಡಿ ಇರಿಸಿ ದುಡಿಯುತ್ತಿದ್ದ ಇವರು ಕಳೆದೆರಡು ವರ್ಷಗಳ ಹಿಂದೆ ದುಬೈಗೆ ತೆರಳಿದ್ದರು.ಮೃತರು ಪತ್ನಿ ಹೇಮಾವತಿ, ತಾಯಿ ಚಂದ್ರಾವತಿ, ಮಕ್ಕಳಾದ ತಸ್ವಿ,ಹಿಮಾಲಿ,ಮಹರ್ಥ್,ಸಹೋದರ ಚಂದ್ರಶೇಖರ, ವಾಮನ,ಸಹೋದರಿ ಶ್ಯಾಮಲ ಎಂಬಿವರನ್ನಗಲಿದ್ದಾರೆ.

Post a Comment

0 Comments