ಬದಿಯಡ್ಕ: ನೆಲ್ಲಿಕಟ್ಟೆಯಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ನೆಲ್ಲಿಕಟ್ಟೆ ಬಳಿಯ ಪೈಕ ನಿವಾಸಿ ಶಂಸುದ್ದೀನ್ ಅವರ ಪುತ್ರ ಸಲ್ಮಾನ್ ಫಾರಿಸ್ (22) ಇಂದು ಮಧ್ಯಾಹ್ನ ಚೆಂಗಳದ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾದರು. ಈ ತಿಂಗಳ 20 ರಂದು ಬೆಳಿಗ್ಗೆ 6 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಈತನ ತಂದೆ ಶಂಸುದ್ದೀನ್ ಮೃತಪಟ್ಟಿದ್ದು, ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಫಾರಿಸ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಾಯಿ ರಹೀಮಾ. ಸಹೋದರ-ಸಹೋದರಿಯರಾದ ರಶೀದ್, ಅರಾಫತ್, ಫಾತಿಮಾ, ಸಹದ್ ಎಂಬಿವರನ್ನಗಲಿದ್ದಾರೆ.

0 Comments