ಪೆರ್ಲ : ಶಿರಿಯಾ ಅಣೆಕಟ್ಟಿನ ಸಮೀಪದ ಮನೆಯೊಂದರೊಳಗೆ ಯುವಕನೋರ್ವನ ಮೃತದೇಹ ನಿದ್ದೆಯ ನಡುವೆ ಸಾವನ್ನಪ್ಪಿದ ರೀತಿಯಲ್ಲಿ ಗುರುವಾರ ರಾತ್ರಿ  ಪತ್ತೆಯಾಗಿದೆ. ಮಂಜೊಟ್ಟಿ ದಿ.ದೇವಣ್ಣ ನಾಯ್ಕರ ಪುತ್ರ ಪ್ರವೀಣ (41) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ನಿರ್ವಹಿಸುವ ಈತ ಅವಿವಾಹಿತನಾಗಿದ್ದು ಮನೆಯಲ್ಲಿ ಒಬ್ಬಂಟಿಗನಾಗಿ ವಾಸಿಸುತ್ತಿದ್ದು ಈತನ   ಮೊಬೈಲ್ ಪೋನ್ ಗೆ ಸಹೋದರಿ ಕಳೆದ ದಿನ ಪೋನ್ ಮಾಡಿ ರಿಂಗಣಿಸಿದರೂ ತೆಗೆಯದಿರುವಾಗ ಸಂಜೆ  ಮನೆಗೆ ಹೋಗಿ ನೋಡಿದಾಗ ನಿದ್ದೆಯಲ್ಲಿ ಸಾವನ್ನಪ್ಪಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.   ಈತ ರಾತ್ರಿ ಮಲಗಿದ್ದಲ್ಲಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಈ ಬಗ್ಗೆ ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದು ಮೃತದೇಹದ ಪೋಸ್ಟುಮಾರ್ಟಂ‌ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಮೃತ ತಾಯಿ ಲಲಿತಾ ಈ ಹಿಂದೆಯೇ ನಿಧನಗೊಂಡಿದ್ದು ಸಹೋದರಿಯರಾದ ಶಾರದ, ಪುಷ್ಪಾ, ಉಮಾವತಿ,ಗಂಗಾವತಿ, ಭವಾನಿ ಹಾಗೂ ಸಹೋದರ ಸಂತೋಷ್ ಕುಮಾರ್ ಎಂಬಿವರನ್ನಗಲಿದ್ದಾನೆ.