ಕಾಸರಗೋಡು : ​ಎಪ್ಪತ್ತೈದನೇ ವರ್ಷದ ಸಂಭ್ರಮದಲ್ಲಿರುವ ಜಿ.ಎಚ್.ಎಸ್.ಎಸ್. ಬಂದಡ್ಕದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಸಂದರ್ಭದಲ್ಲಿ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವ ಎಂ. ಎನ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಗ ತರಬೇತುದಾರರಾದ ಶ್ರೀಜಾ ಕೆ. ಆರ್. ಮತ್ತು ಶ್ರೀಕಲಾ ಸಿ. ಅವರ ನೇತೃತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ಆರನೇ ತರಗತಿಯ ವಿದ್ಯಾರ್ಥಿನಿ ಸಹಸ್ರ ಸಂತೋಷ್ ಅವರ ಯೋಗ ಪ್ರದರ್ಶನವು ಪ್ರೇಕ್ಷಕರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ಹಿರಿಯ ಶಿಕ್ಷಕಿ ಅಜಯ ಪಿ. ಎನ್. ಅವರು ಉಪಸ್ಥಿತರಿದ್ದರು.