ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂಬಂಧ ನಡೆದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದು, ಕೆ.ಎಂ.ಎ. ಸತ್ತಾರ್ ಹಾಗೂ ಅಬ್ದುಲ್ಲಾ ಕುಂಬಳೆ ಮಾತನಾಡಿದರು. ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳುವಾರ್ ಸ್ವಾಗತಿಸಿದರು. .

ಸಭೆಯಲ್ಲಿ ಫೋರಂನ ನೂತನ ಪದಾಧಿಕಾರಿಗಳಾಗಿ ಅಬ್ದುಲ್ಲಾ ಕುಂಬಳೆ (ಕಾರವಲ್) ಅವರನ್ನು ಅಧ್ಯಕ್ಷರಾಗಿ, ಐ. ಮೊಹಮ್ಮದ್ ರಫೀಕ್ (ಸುಪ್ರಭಾತ) ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಅಬ್ದುಲ್ ಲತೀಫ್ ಜೆಎಚ್‌ಎಲ್ (ಟ್ರೂ ನ್ಯೂಸ್) ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಪುರುಷೋತ್ತಮ ಭಟ್ (ವಿಜಯವಾಣಿ) ಹಾಗೂ ಅಬ್ದುಲ್ ಲತೀಫ್ (ಕಾಸರಗೋಡು ವಿಷನ್) ಆಯ್ಕೆಯಾಗಿದ್ದಾರೆ. ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಉಳುವಾರ್ (ಮಾಧ್ಯಮಂ) ಮತ್ತು ಅಬ್ದುಲ್ ರಶೀದ್ (ಮಲಯಾಳ ಮನೋರಮ) ಅವರನ್ನು ನೇಮಕ ಮಾಡಲಾಗಿದೆ.