ಕುರುಡಪದವು : ಎ.ಯು.ಪಿ ಶಾಲೆ ಕುರುಡಪದವಿನಲ್ಲಿ ವಾಚನಾ ದಿನದ ಉದ್ಘಾಟನೆಯು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಬಷೀರ್ ಸಾಪ್ಟ್ಕೋ ವಹಿಸಿದ್ದರು. ವಿದ್ಯಾರ್ಥಿನಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಗಿರೀಶ್ ವಾಚನಾ ದಿನದ ಪ್ರಾಸ್ತಾವಿಕ ನುಡಿಗಳನ್ನಾಡುವುದರೊಂದಿಗೆ ಅಥಿತಿಗಳೂ ಸೇರಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಸತ್ಯಸಾಯಿ ಲೋಕಸೇವಾ ಶಾಲೆ ಅಳಿಕೆ ಇಲ್ಲಿನ ನಿವೃತ್ತ ಗಣಿತ ಅಧ್ಯಾಪಕ ಉದನೇಶ್ವರ ಭಟ್ ಅಳಿಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಓದು ನಮ್ಮ ಜೀವನಕ್ಕೆ ಅತೀ ಅಗತ್ಯ. ಒಳ್ಳೆಯ ಸಾಹಿತ್ಯವನ್ನು ಓದುವುದರಿಂದ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಸಾಧ್ಯವಾಗುವುದು ಮಾತ್ರವಲ್ಲದೆ, ಸಂಸ್ಕಾರಯುತ ಜೀವನ ನಮ್ಮದಾಗುತ್ತದೆ ಎಂದರು. ಅಧ್ಯಾಪಕ ಪ್ರಶಾಂತ್ ಕುಮಾರ್ ಅಮ್ಮೇರಿಯವರು ವಾಚನಾ ದಿನದ ಪ್ರತಿಜ್ಞೆಯನ್ನು ಮಕ್ಕಳಿಗೆ ಬೋಧಿಸಿದರು. ನಂತರ ಕೇರಳ ಗ್ರಂಥ ಶಾಲಾ ನಿರ್ಮಾಪಕರಾದ ಪಿ.ಎನ್.ಪಣಿಕ್ಕರ್ ಅವರ ಜೀವನ ‍ಚರಿತ್ರೆಯನ್ನು ಒಳಗೊಂಡ ವೀಡಿಯೋವನ್ನು ಮಕ್ಕಳಿಗೆ ತೋರಿಸಲಾಯಿತು. ಮಜಿಬೈಲು ಶಾಲಾ ಅಧ್ಯಾಪಕರಾದ ದೇವಾನಂದ ಬರೆದ, ಓದಿನ ಮಹತ್ವಕ್ಕೆ ಸಂಬಂಧಪಟ್ಟ ಹಾಡನ್ನು ಮಕ್ಕಳಿಗೆ ಕೇಳಿಸಲಾಯಿತು.

ಉದ್ಘಾಟಕರಾದ ಉದನಂತೇಶ್ವರ ಭಟ್ ಅವರನ್ನು ಶಾಲಾ ಮುಖ್ಯೋಪಾಧ್ಯಾಯ, ಅಧ್ಯಾಪಕರು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ, ಅಧ್ಯಕ್ಷೆ ಸೇರಿ, ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸಭಾಧ್ಯಕ್ಷರಾದ  ಬಷೀರ್ ಸಾಪ್ಟ್ಕೋ ಅಧ್ಯಕ್ಷೀಯ ನುಡಿಗಳನ್ನಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಕ್ಷಕ-ಶಿಕ್ಷಕ ಅಧ್ಯಕ್ಷೆ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಧ್ಯಾಪಿಕೆ ದೀಕ್ಷಾ ಧನ್ಯವಾದ ಸಮರ್ಪಿಸಿದರು. ಅಧ್ಯಾಪಕ ಸತೀಶ್ ಸುವರ್ಣ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರಾದ ಅಬ್ದು ರಹೀಂ, ಯಶಸ್, ದೀಕ್ಷಿತ್, ಅಧ್ಯಾಪಿಕೆಯರಾದ  ಹರ್ಷಿತಾ, ಅರ್ಚನಾ, ಮೋಹಿನಿ, ಶಾಲಾ ಸಿಬ್ಬಂದಿ ಚಿದಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಕ್ಕಳು ಪುಸ್ತಕ ಪ್ರದರ್ಶನವನ್ನು ವೀಕ್ಷಿಸುವುದರೊಂದಿಗೆ, ಗ್ರಂಥಾಲಯದಿಂದ ಒಂದೊಂದು ಪುಸ್ತಕವನ್ನು ಪಡೆದುಕೊಂಡರು.