ಮುಳ್ಳೇರಿಯ: ಪ್ಲಸ್ ಟು ವಿದ್ಯಾರ್ಥಿಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು ಪಾಂಡಿ ಬೆಳ್ಳಚ್ಚೇರಿಯ  ಶಶಿ ಎಂಬುವವರ ಪುತ್ರ ಗೋಕುಲ್ (17) ಮೃತಪಟ್ಟ ದುರ್ದೈವಿ. ನಿನ್ನೆ (ಮಂಗಳವಾರ) ರಾತ್ರಿ ಈ ಘಟನೆ ನಡೆದಿದೆ. ಮೃತನ ತಂದೆ ಗಲ್ಫ್ ಉದ್ಯೋಗಿಯಾಗಿದ್ದು ಘಟನೆಯ ಸಮಯದಲ್ಲಿ ಮನೆಯಲ್ಲಿ ತಾಯಿ ಧನ್ಯ  ಮತ್ತು ಗೋಕುಲ್ ಮಾತ್ರ ಇದ್ದರು. ಸಹೋದರಿ ಗೋಪಿಕಾ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ, ಇಂದು  ಮನೆಯ ಬಳಿ ಸಂಸ್ಕಾರ ನಡೆಯಲಿದೆ.