ಬದಿಯಡ್ಕ : ಕುಂಬ್ಡಾಜೆ ಪಂಚಾಯತಿನ ಬೆಳಿಂಜ ಸಮೀಪದ ಆಲಿಂಜ, ಮರತ್ತಿಲ ಪ್ರದೇಶದಲ್ಲಿ ಹುಲಿ ಇರುವುದಾಗಿ ಗುಮಾನಿಯಿದ್ದು ಮರತ್ತಿಲ ಎಂಬಲ್ಲಿ ಮಣ್ಣು ಸಮತಟ್ಟು ಮಾಡಿದ ಜಾಗದಲ್ಲಿ ಹುಲಿ ಹೆಜ್ಜೆಗಳನ್ನು ಹೋಲುವ ಗುರುತುಗಳು ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಹುಲಿ ಇರುವ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ನಾಲ್ವರ ತಂಡವೊಂದು ರಾತ್ರಿ ನಡೆದುಕೊಂಡು ಹೋಗುವ ವೇಳೆ ಒಂದು ಕಡೆ ಹುಲಿಯನ್ನು ಹೋಲುವ ಪ್ರಾಣಿಯೊಂದು ಕಂಡು ಬಂದಿದ್ದು ಅವರು ಹೆದರಿ ಕಾಲ್ಕಿತ್ತಿದ್ದರು. ಬಳಿಕ ಇದೀಗ ಹೆಜ್ಜೆ ಕಂಡು ಬಂದಿರುವುದರಿಂದ ಸ್ಥಳೀಯರಲ್ಲಿ ಆತಂಕ ಅಧಿಕವಾಗಿದ್ದು ಜನರಿಗೆ  ಜಾಗೃತೆವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿದೆ.