ಬದಿಯಡ್ಕ: ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ ಘಟನೆ ಪೈಕದ ಚಾಂಡಿಮೂಲದಲ್ಲಿ ನಡೆದಿದೆ.
ಮೃತರನ್ನು ಚಿತ್ರಕಲಾ (41) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 12.45ಕ್ಕೆ ಮನೆಯ ಸಮೀಪದ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತರು ಪತಿ ಶಂಕರನ್ ಹಾಗೂ ಪುತ್ರರಾದ ಪ್ರೀತೇಶ್ ಮತ್ತು ಪ್ರಖ್ಯಾತ್ ಅವರನ್ನು ಅಗಲಿದ್ದಾರೆ.

0 Comments