ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ ತಾಲೂಕಿನ ಕಳತ್ತೂರಿನ ಶ್ರೀ ಮಹಾದೇವ ಸಮುದಾಯ ಭವನದಲ್ಲಿ ನಡೆಯುತ್ತಿರುವ 2080ನೇ ಮಧ್ಯವರ್ಜನ ಶಿಬಿರದ ಮೂರನೇ ದಿನ ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆಯಿತು.
ಗುಂಪು ಸಲಹೆ ಕಾರ್ಯಕ್ರಮದ ಅಂಗವಾಗಿ ಸಿವಿಲ್ ಎಕ್ಸೈಸ್ ಅಧಿಕಾರಿ ಜನಾರ್ಧನ್ ಅವರು ಮದ್ಯವ್ಯಸನದ ದುಷ್ಪರಿಣಾಮಗಳು, ವ್ಯಸನಮುಕ್ತ ಜೀವನದ ಮಹತ್ವ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸೋಮಯ್ಯ ಸೂರಂಬೈಲು ಹಾಗೂ ಪೆರ್ಲ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಪಿ. ಶೇಣಿ ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

0 Comments