ಕುಂಬಳೆ : ಯಾವುದೇ ವ್ಯಸನವು ರೋಗ ರುಜಿನಗಳಿಗೆ ದಾರಿ ಮಾಡಿಕೊಡುವ ದುಶ್ಚಟವಾಗಿದ್ದು ಚಟ ಮುಕ್ತ ಜೀವನವು ಪ್ರತಿಯೊಬ್ಬನ‌ ಬದುಕಿನ ಸಾಧನೆಗೆ ಹಾದಿಯಾಗಬಲ್ಲುದು ಎಂದು ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು. ಅವರು   ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳತ್ತೂರಿನ ಶ್ರೀಮಹಾದೇವ ಸಭಾ ಭವನದಲ್ಲಿ ನಡೆದ 2080ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಆಶೀರ್ವಚನಗೈದರು. ಮದ್ಯ ಕುಡಿದ ಬರುವವರಿಗೆ ಅದರ ಅಮಲಿನಲ್ಲಿ ವಾಸ್ತವದ ಅರಿವಿಲ್ಲದಿದ್ದರೂ ಅದರ ನೋವುಗಳನ್ನು ಉಣ್ಣ ಬೇಕಾದವರು ವ್ಯಸನಿಗಳ ಮನೆಯವರಾಗಿದ್ದಾರೆ. ಆದ್ದರಿಂದ ಮಾದಕದ ವಸ್ತುಗಳಿಂದ ದೂರವಿದ್ದರೆ ಕುಟುಂಬದ ಜನತೆಯ ಪ್ರೀತಿಗೆ ಹತ್ತಿರವಾಗಬಹುದು ಎಂದರು.  

2080ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕಳತ್ತೂರು,ಮಂಜೇಶ್ವರ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬೆಳ್ತಂಗಡಿ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.), ಮಂಜೇಶ್ವರ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು. ಮದ್ಯವರ್ಜನ ವ್ಯವಸ್ಥಾಪನಾ ಗೌರವಾಧ್ಯಕ್ಷ

 ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ    ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್‌ ಕುಟುಂಬ ದಿನ ಕಾರ್ಯಕ್ರಮವನ್ನುದ್ದೇಶಿಸಿ ದಿಕ್ಸೂಚಿ ಭಾ಼ಷಣಗೈದರು. ಕುಡಿತ ಮಾದಕ ವ್ಯಸನದ ಚಟ ಬಿಟ್ಟು  ನವಜೀವನಕ್ಕೆ ಮರಳಿದ ಶಿಬಿರಾರ್ಥಿಗಳಿಗೆ ಪುನರ್ ವಿವಾಹ ಹಾಗೂ ಮಾತೃ ವಂದನಾ ಕಾರ್ಯಕ್ರಮ‌ ನಡೆಸಲಾಯಿತು.ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಶಾಸಕ.ಎ.ಕೆ.ಎಂ ಅಶ್ರಫ್ .ಜಿಲ್ಲಾ ಪಂಚಾಯತ್ ಸದಸ್ಯ   ಸೋಮಶೇಖರ ಜೆ. ಎಸ್‌, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯಸುಕೇಶ್ ಭಂಡಾರಿ ,ಜನಜಾಗೃತಿ ವೇದಿಕೆ ಕಾಸರಗೋಡು ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಆರಿಬೈಲು, ಭಜನಾ ಪರಿಷತ್ತಿನ ಕಾಸರಗೋಡು ತಾಲೂಕು ಅಧ್ಯಕ್ಷ  ವೆಂಕಟ್ರಮಣ ಹೊಳ್ಳ ಕಾಸರಗೋಡು,  ನಿಕಟಪೂರ್ವ ಅಧ್ಯಕ್ಷ ಅಖಿಲೇಶ್ ನಗುಮುಗಂ.ನ್ಯಾಯವಾದಿ  ಉದಯ ಗಟ್ಟಿ ಕುಂಬಳೆ,ಜೀವನಾಥ್ ಜೋಡುಕಟ್ಟೆ,   ಜನಜಾಗೃತಿ ವೇದಿಕೆ  ಮಾಜಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‌ಬಾಗ್, ಹರೀಶ್ ಶೆಟ್ಟಿ ಕಡಂಬಾರು ಜನಜಾಗೃತಿ ತಲಪಾಡಿ ವಲಯಾಧ್ಯಕ್ಷರು ಹರೀಶ್ ಶೆಟ್ಟಿ ಕಡಂಬಾರು.ಕುಂಬಳೆ ಸೇವಾ ಸಹಕರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಮಡ್ವ,ಕ್ಷಿರೋತ್ಪಾದನ ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜ.

ವಿದ್ಯಾ ಪೈ.ಮಂಜೇಶ್ವರ, ಚಂದ್ರ ಕಾಜೂರು.ಕೆ.ಸಿ ಮೋಹನ್ ಕಳತ್ತೂರು, ವಿನೋದ ಜಯಪ್ರಸಾದ್ ರೈ ಕಾರಿಂಜ, ಜಯರಾಮ ಪಾಟಾಲಿ ಪಡುಮಲೆ. ಕುಂಬಳೆ ವಲಯಾಧ್ಯಕ್ಷರಾದ ಮಹೇಶ್ ಪುಣಿಯೂರು ಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಗಣೇಶ ಆಚಾರ್ಯ ಉಡುಪಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರಾರ್ಥಿಗಳ ಮಾಹಿತಿ  ಮಾಹಿತಿ ನೀಡಿದರು.ಮಂಜೇಶ್ವರ ತಾಲೂಕು ಯೋಜನಾಧಿಕಾರಿ   ಶಶಿಕಲಾ ಸುವರ್ಣ ಸ್ವಾಗತಿಸಿ ಕುಂಬಳೆ ವಲಯ ಮೇಲ್ವಿಚಾರಕರು ಅಭಿಷೇಕ್ ಡಿ ವಂದಿಸಿದರು.‌ಸಾಹಿತಿ ಶ್ರೀನಿವಾಸ ಆಳ್ವ ಕಳತ್ತೂರು ನಿರೂಪಿಸಿದರು.